ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮಸಭೆ : ಗ್ರಾಮದ ಅಭಿವೃದ್ಧಿಗೆ ವಿಶೇಷ 1 ಕೋಟಿ ರೂ.ಅನುದಾನ

ಬೆಂಗಳೂರು : ಹೊಸಕೋಟೆ ತಾಲ್ಲೂಕಿನ ಜಡಿಗೇನಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಅರಳಿಕಟ್ಟೆಯ ಮೇಲೆ ಕಂದಾಯ ಸಚಿವರಾದ ಆರ್.ಅಶೋಕ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮಸಭೆ ಜರುಗಿತು.
ಗ್ರಾಮದ ಅಭಿವೃದ್ಧಿಗೆ ನೀಡಿರುವ 1 ಕೋಟಿ ರೂ.ವಿಶೇಷ ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಗ್ರಾಮದ ಚರಂಡಿ ವ್ಯವಸ್ಥೆ ಸರಿಪಡಿಸಿ ಊರಿನ ಕೊಳಚೆ ನೀರು ಹೊರಗೆ ಹಾಕುವ ವ್ಯವಸ್ಥೆ ಮಾಡಬೇಕು.ಕಾನೂನು ,ಸುವ್ಯವಸ್ಥೆ ನಿರ್ವಹಣೆಗೆ ಪೊಲೀಸ್ ಠಾಣೆ ಸ್ಥಾಪನೆ,ಅಂಗನವಾಡಿ ಕಟ್ಟಡ ನಿರ್ಮಾಣ,ಐತಿಹಾಸಿಕ ಚಂದ್ರಮೌಳೇಶ್ವರ ದೇವಾಲಯದ ಜೀರ್ಣೋದ್ಧಾರ,ವ್ಯಾಯಾಮ ಶಾಲೆ,ವ್ಹಾಲಿಬಾಲ್ ಮೈದಾನ ಕುರಿತು ಗ್ರಾಮಸ್ಥರು ಮನವಿ ಮಾಡಿದರು.
ಬಾಲಕಿಯ ಮನವಿಗೆ ಸಚಿವರ ತ್ವರಿತ ಸ್ಪಂದನೆ
ವಿದ್ಯಾರ್ಥಿನಿ ಭೂಮಿಕಾ ಮಾತನಾಡಿ,ಗ್ರಾಮದ ವಿದ್ಯಾರ್ಥಿಗಳಿಗೆ ಬಸ್ ತಂಗುದಾಣದಲ್ಲಿ ಕುಳಿತು ಕೊಳ್ಳಲು ಆಸನ ವ್ಯವಸ್ಥೆ ಮಾಡಬೇಕು ಎಂದು ಕೋರಿದಳು. ತಕ್ಷಣ ಪ್ರತಿಕ್ರಿಯೆ ನೀಡಿದ ಸಚಿವ ಆರ್.ಅಶೋಕ ಬಾಲಕಿಯ ಬೇಡಿಕೆಯನ್ನು ಆದ್ಯತೆಯಡಿ ಪರಿಗಣಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಆರೋಗ್ಯ,ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್,ಪೌರಾಡಳಿತ, ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರಾದ ಎನ್.ನಾಗರಾಜ(ಎಂಟಿಬಿ),ಗ್ರಾಪಂ ಅಧ್ಯಕ್ಷೆ ಪಲ್ಲವಿ ಅರುಣಕುಮಾರ್, ಉಪಾಧ್ಯಕ್ಷ ಹೆಚ್.ಎನ್.ರವಿ,ಜಿಲ್ಲಾಧಿಕಾರಿ ಆರ್.ಲತಾ,ಜಿಪಂ ಸಿಇಓ ಕೆ.ರೇವಣಪ್ಪ,ಉಪವಿಭಾಗಾಧಿಕಾರಿ ತೇಜಸ್ ಕುಮಾರ,ಜಿಪಂ ಉಪಕಾರ್ಯದರ್ಶಿ ಡಾ.ನಾಗರಾಜ ಮತ್ತಿತರರು ಇದ್ದರು..