ಗೌರಿಶಂಕರ್' ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಅವರ ಪತ್ನಿಗೆ ಟಿಕೆಟ್ : ಸಿ.ಎಂ ಇಬ್ರಾಹಿಂ ಘೋಷಣೆ

ಗೌರಿಶಂಕರ್' ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಅವರ ಪತ್ನಿಗೆ ಟಿಕೆಟ್ : ಸಿ.ಎಂ ಇಬ್ರಾಹಿಂ ಘೋಷಣೆ

ತುಮಕೂರು : ಚುನಾವಣೆಯಲ್ಲಿ ಅಕ್ರಮ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಬಿ.ಸಿ. ಗೌರಿಶಂಕರ್ ಆಯ್ಕೆ ಅಸಿಂಧು ಎಂದು ಕಲಬುರಗಿ ಪೀಠ ತೀರ್ಪು ನೀಡಿದೆ.

ಇದರ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಹತ್ವದ ಘೋಷಣೆ ಮಾಡಿದ್ದು, ಹೈಕೋರ್ಟ್ ತೀರ್ಪಿನಿಂದ ಗೌರಿಶಂಕರ್ ಸ್ಪರ್ಧಿಸಲು ತೊಡಕಾದರೆ ಅವರ ಪತ್ನಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ.

ಹೈಕೋರ್ಟ್ ನೀಡಿದ ತೀರ್ಪಿನಲ್ಲಿರುವ ಅಂಶವನ್ನು ಕೂಲಂಕುಷವಾಗಿ ತಿಳಿದುಕೊಳ್ಳಲಾಗುತ್ತದೆ. ಒಂದು ವೇಳೆ ಗೌರಿಶಂಕರ್ ಸ್ಪರ್ಧಿಸದೇ ಇದ್ದರೆ ಅವರ ಪತ್ನಿಯನ್ನು ವಿಧಾನಸಭಾ ಚುನಾವಣಾ ಕಣಕ್ಕಿಳಿಸಲಾಗುತ್ತದೆ ಎಂದು ಇಬ್ರಾಹಿಂ ಹೇಳಿದ್ದಾರೆ.

ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿದ್ದು, ಶಾಸಕ ಗೌರಿಶಂಕರ್ ಅವರು ಚುನಾವಣೆಯಲ್ಲಿ ಅಕ್ರಮ ಎಸಗಿರುವುದು ಸಾಬೀತಾಗಿದ್ದು, ಗೌರಿಶಂಕರ್ ಚುನಾವಣೆಗೆ ಸ್ಪರ್ಧಿಸದಂತೆ 6 ವರ್ಷ ಅನರ್ಹತೆ ಮಾಡಿದೆ.2018ರ ಚುನಾವಣೆಯಲ್ಲಿ ಮತದಾರರಿಗೆ ವಿಮಾ ಪಾಲಿಸಿಯ ನಕಲಿ ಬಾಂಡ್ ವಿತರಿಸಿದ ಕೇಸ್ಗೆ ಸಂಬಂಧಿಸಿದಂತೆ ಈಗ ಹೈಕೋರ್ಟ್ನಲ್ಲಿ ಅಂತಿಮ ತೀರ್ಪು ಪ್ರಕಟವಾಗಿದ್ದು. ಗೌರಿಶಂಕರ್ ವಿರುದ್ಧದ ಆರೋಪ ಸಾಬೀತಾಗಿದ್ದು ಶಾಸಕ ಸ್ಥಾನ ಅನರ್ಹಗೊಂಡಿದೆ. ಅಷ್ಟೇ ಅಲ್ಲ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಆದೇಶ ನೀಡಿದೆ.

ಎಸ್ ಆರ್ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ವಿಚಾರ; ಕೈ ಟಿಕೆಟ್ ಆಕಾಂಕ್ಷಿ ಪ್ರಸನ್ನಕುಮಾರ್ ಅಸಮಾಧಾನ

ತುಮಕೂರು: ಎಸ್ ಆರ್ ಶ್ರೀನಿವಾಸ್ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಆದ್ರೂ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಗೊಂದಲ, ಅಸಮಾಧಾನ ನಡೆಯುತ್ತಿದೆ. ಇದೀಗ ಮತ್ತೊಬ್ಬ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪ್ರಸನ್ನಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.

ಶ್ರೀನಿವಾಸ್ ಕಾಂಗ್ರೆಸ್ ಬಂದಿರುವುದಕ್ಕೆ ಈಗಲೂ ವಿರೋಧ ಇದೆ. ಹೀಗಾಗಿ ನಮಗೆ ಮುಂದೆ ಟಿಕೆಟ್ ಕೊಡಿಸಿ ಗುಬ್ಬಿಯಲ್ಲಿ ಕಾಂಗ್ರೆಸ್ ಗೆಲ್ಲಿಸಲಿ ಎಂದು ಸವಾಲು ಹಾಕಿದ್ದಾರೆ. ಶ್ರೀನಿವಾಸ್ ಆಗಲಿ ಅಥವಾ ಕಾಂಗ್ರೆಸ್ ನಾಯಕರಾಗಲಿ ಯಾರು ಕೂಡ ನಮ್ಮನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿಲ್ಲ. ಶ್ರೀನಿವಾಸ್ ಪಕ್ಷಕ್ಕೆ ಬಂದಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿ ತಿಳಿಯಿತು. ಸೇರ್ಪಡೆಗೂ ಕೂಡ ನಮನ್ನ ಆಹ್ವಾನಿಸಿಲ್ಲ ಎಂದರು.