ಗುತ್ತಿಗೆದಾರ ಮಂಜುನಾಥ್ ಆರೋಪಕ್ಕೆ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಹೇಳಿದ್ದೇನು ಗೊತ್ತಾ?
ಚಿತ್ರದುರ್ಗ: ಈ ಹಿಂದಿನಿಂದಲೂ ಗುತ್ತಿಗೆದಾರ ಮಂಜುನಾಥ್ ಹಾಗೂ ನನ್ನ ನಡುವೆ ದ್ವೇಷವಿದೆ. ಆತ ಮಾಡಿದಂತ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅಷ್ಟು ಕೊಟ್ಟಿದ್ದೇನೆ, ಇಷ್ಟು ಕೊಟ್ಟಿದ್ದೇನೆ ಅಂತ ಹೇಳುತ್ತಿದ್ದಾನೆ. ಯಾರಿಗೆ ಕೊಟ್ಟಿದ್ದಾನೆ ಎಂಬುದೇ ಗೊತ್ತಿಲ್ಲ ಎಂಬುದಾಗಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಆಡಿಯೋ ವೈರಲ್ ವಿಚಾರವಾಗಿ ಮಾತನಾಡಿದಂತ ಅವರು, ಮೊದಲಿನಿಂದಲೂ ನನ್ನ ಹಾಗೂ ಮಂಜುನಾಥ್ ನಡುವೆ ದ್ವೇಷವಿದೆ. ಎಲ್ಲಾ ಕಾಮಗಾರಿಯ ವೇಳೆಯಲ್ಲಿ ಆತ ಸುಪ್ರೀಂ ರೀತಿಯಲ್ಲಿ ವರ್ತಿಸುತ್ತಾನೆ ಎಂದು ಗುಡುಗಿದರು.
ಗುತ್ತಿಗೆದಾರ ಮಂಜುನಾಥ್ ಗುಣವೇ ಹೆದರಿಸೋದು. ಆತ ಗುತ್ತಿಗೆ ಕಮೀಷನ್ ಅಷ್ಟು, ಇಷ್ಟು ಕೊಟ್ಟಿದ್ದಾನೆ ಎಂಬುದಾಗಿ ಹೇಳುತ್ತಾನೆ. ಯಾರಿಗೆ ಎಲ್ಲಿ ಕೊಟ್ಟಿದ್ದಾನೆ ಎಂಬುದೇ ಗೊತ್ತಿಲ್ಲ ಎಂಬುದಾಗಿ ಹೇಳುವ ಮೂಲಕ, ಮಂಜುನಾಥ್ ಆರೋಪಕ್ಕೆ ತಿರುಗೇಟು ನೀಡಿದರು.
ಅಂದಹಾಗೇ ಗುತ್ತಿಗೆದಾರ ಮಂಜುನಾಥ್ ಹಾಗೂ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅವರ ನಡುವಿನ ಗುತ್ತಿಗೆ ಕಮೀಷನ್ ಆಡಿಯೋವನ್ನು ಗುತ್ತಿಗೆದಾರರ ಸಂಘದಿಂದ ಬಿಡುಗಡೆ ಮಾಡಲಾಗಿತ್ತು. ರಿಲೀಸ್ ಮಾಡಿದಂತ ಆಡಿಯೋದಲ್ಲಿ ಗುತ್ತಿಗೆ ಕಮೀಷನ್ ಕೇಳಿದ್ದಾರೆ ಎಂಬುದಾಗಿ ಆರೋಪಿಸಲಾಗಿತ್ತು. ಈ ಮೂಲಕ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ವಿರುದ್ಧ ಕಮೀಷನ್ ಆರೋಪ ಮಾಡಲಾಗಿತ್ತು.