ಗಣರಾಜ್ಯೋತ್ಸವ ಹಿನ್ನೆಲೆ ಲಾಲ್​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಗಣರಾಜ್ಯೋತ್ಸವ ಹಿನ್ನೆಲೆ ಲಾಲ್​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಜನವರಿ 26ರಂದು ಗಣರಾಜ್ಯೋತ್ಸವ ಹಿನ್ನೆಲೆ ಲಾಲ್​ಬಾಗ್​ನಲ್ಲಿ ತೋಟಗಾರಿಕೆ ಇಲಾಖೆ ಪುಷ್ಪ ಪ್ರದರ್ಶನ ಏರ್ಪಡಿಸಿದೆ. ಇದೀಗ 213ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದೆ.

ಇಂದು ಸಿಎಂ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ಮಾಡುವ ಮೂಲಕ ಲಾಲ್​ಬಾಗ್ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 213 ಪ್ಲವರ್ ಶೋ ಅನ್ನು ತುಂಬಾ ಸಂತಸದಿಂದ ಉದ್ಘಾಟನೆ ಮಾಡಲಾಗಿದೆ. ಮೂಡಿಬಂದಿದೆ. ಪ್ರತಿವರ್ಷ ಲಕ್ಷಗಟ್ಟಲೆ ಜನರು ಈ ಫ್ಲವರ್ ಶೋಗೆ ಬರ್ತಾರೆ.

ಈ ಬಾರಿ 10 ರಿಂದ15 ಲಕ್ಷ ಜನರು ಬರ್ತಾರೆ ಎಂದರು. ಎಲ್ಲಾ ರೀತಿಯ ಸಿದ್ದತೆಯನ್ನ ತೋಟಗಾರಿಕೆ ಇಲಾಖೆ ಮಾಡಿಕೊಂಡಿದೆ. ತೋಟಾಗಾರಿಕೆಯ ಫಲಪುಷ್ಪ ಪ್ರದರ್ಶನ ವಿಶಿಷ್ಟವಾದದ್ದು ಪ್ರದರ್ಶನದಲ್ಲಿ ನಮ್ಮ ರಾಜ್ಯ ಸಂಪತ್ತು ಎಷ್ಟು ಇದೆ, ಎಷ್ಟು ವಿಶೇಷ ಹಾಗೂ ವಿಶಾಲವಾಗಿದೆ ಎಂಬುವುದನ್ನ ತಿಳಿಸುತ್ತದೆ. ನಗರದಲ್ಲಿ ತೋಟಗಾರಿಕೆಯ ಹಸೀರಿಕರಣವನ್ನ ಹೆಚ್ಚಿಸಲು ಅನುಧಾನವನ್ನ ಮೀಸಲಿಡುತ್ತಿದ್ದೇವೆ. ಈ ವರ್ಷದ ಬಜೆಟ್ ನಲ್ಲಿ 100 ಕೋಟಿಯನ್ನ ಹಸಿರೀಕರಣ ಹೆಚ್ಚಿಸಲು ಮೀಸಲಿಟ್ಟಿದ್ದೇವೆ. ಗುಡ್ಡಗಾಡು ಪ್ರದೇಶದಲ್ಲಿ ಹಸೀಕರಣ ಮಾಡುತ್ತೇವೆ ಎಂದರು.