ಗಣರಾಜ್ಯೋತ್ಸವ ಪರೇಡ್ ನ ಮುಖ್ಯ ಅತಿಥಿ ಈಜಿಪ್ಟ್ ಅಧ್ಯಕ್ಷ 'ಅಲ್-ಸಿಸಿ' ಭಾರತಕ್ಕೆ ಆಗಮನ

ಗಣರಾಜ್ಯೋತ್ಸವ ಪರೇಡ್ ನ ಮುಖ್ಯ ಅತಿಥಿ ಈಜಿಪ್ಟ್ ಅಧ್ಯಕ್ಷ 'ಅಲ್-ಸಿಸಿ' ಭಾರತಕ್ಕೆ ಆಗಮನ

ವದೆಹಲಿ: ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ನವದೆಹಲಿಗೆ ಆಗಮಿಸಿದ್ದು, ಅವರಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಇವರು 74ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಜ.24-27ರವರೆಗೆ ಅವರ ಅಧಿಕೃತ ಭೇಟಿಗಾಗಿ ಐವರು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ನಿಯೋಗ ಭಾರತಕ್ಕೆ ಆಗಮಿಸಿದೆ. ಅಥಿತಿಗಳನ್ನು ಸಾಂಪ್ರದಾಯಿಕ ಜಾನಪದ ನೃತ್ಯದ ಮೂಲಕ ಸ್ವಾಗತ ನೀಡಲಾಗಿದೆ. ಇದೇ ಮೊದಲು ಗಣರಾಜ್ಯೋತ್ಸವದಂದು ಈಜಿಪ್ಟ್ ಅಧ್ಯಕ್ಷರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ.

ಭಾರತ ಮತ್ತು ಈಜಿಪ್ಟ್ ಈ ವರ್ಷ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ನೇ ವರ್ಷವನ್ನು ಆಚರಿಸುತ್ತಿವೆ. ಭಾರತವು ತನ್ನ ಜಿ20 ಅಧ್ಯಕ್ಷತೆ ಅವಧಿಯಲ್ಲಿ ಈಜಿಪ್ಟ್ ಅನ್ನು 'ಅತಿಥಿ ದೇಶ' ಎಂದು ಆಹ್ವಾನಿಸಿದೆ.