ಕೊಪ್ಪಳದಲ್ಲಿ ಘೋರ ದುರಂತ; ನಿಧಿ ಆಸೆಗಾಗಿ ಬಾಣಂತಿಯ ಭೀಕರ ಹತ್ಯೆ.

ಕೊಪ್ಪಳದಲ್ಲಿ ಘೋರ ದುರಂತ; ನಿಧಿ ಆಸೆಗಾಗಿ ಬಾಣಂತಿಯ ಭೀಕರ ಹತ್ಯೆ.

ಕೊಪ್ಪಳ: ಕೊಪ್ಪಳದಲ್ಲಿ ಘೋರ ಘಟನೆ ನಡೆದಿದೆ. ನಿಧಿ ಆಸೆಗಾಗಿ ಬಾಣಂತಿಯ ಭೀಕರ ಹತ್ಯೆ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.

ಒಂದೂವರೆ ತಿಂಗಳು ಬಾಣಂತಿ 26ವರ್ಷದ ನೇತ್ರಾವತಿ ಕುರಿ ಕೊಲೆಯಾದ ಮಹಿಳೆ.

ಅಮಾವಾಸ್ಯ ಹಿನ್ನೆಲೆ ನಿಧಿಗಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೆಯ ಸ್ವಲ್ಪ ದೂರದಲ್ಲೇ ಬೆಂಕಿ ಹಚ್ಚಿ ನೇತ್ರಾವತಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಕೊಪ್ಪಳ ಗ್ರಾಮಾಂತರ ಪೊಲೀಸರು ಭೇಟಿ ನೀಟಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗಿದೆ.