ವನ್ಯಜೀವಿಗಳ ಸಾಕಾಣಿಕೆ ಪ್ರಕರಣ : 'ಕೈ' ನಾಯಕ ಮಲ್ಲಿಕಾರ್ಜುನ್ ಗೆ ಜಾಮೀನು ಮಂಜೂರು

ವನ್ಯಜೀವಿಗಳ ಸಾಕಾಣಿಕೆ ಪ್ರಕರಣ : 'ಕೈ' ನಾಯಕ ಮಲ್ಲಿಕಾರ್ಜುನ್ ಗೆ ಜಾಮೀನು ಮಂಜೂರು

ಬೆಂಗಳೂರು : ಕಾಂಗ್ರೆಸ್ ನಾಯಕ ಎಸ್.ಎಸ್. ಮಲ್ಲಿಕಾರ್ಜುನ ರೈಸ್ ಮಿಲ್ ಆವರಣದಲ್ಲಿ ವನ್ಯಜೀವಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.

ದಾವಣಗೆರೆಯ 2 ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಮಲ್ಲಿಕಾರ್ಜುನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜ.5 ಕ್ಕೆ ಮುಂದೂಡಿತ್ತು, ನಿನ್ನೆ ಕೋರ್ಟ್ ವಿಚಾರನೆ ನಡೆಸಿ ಮಲ್ಲಿಕಾರ್ಜುನ ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ರೈಸ್ ಮಿಲ್ ಆವರಣದಲ್ಲಿ ವನ್ಯಜೀವಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ವಿರುದ್ಧ ಪ್ರಕರಣ ದಾಖಲಾಗಿದ್ದು, ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ಸ್ವೀಕರಿಸಿದ ಕೋರ್ಟ್ ಜ,2 ಕ್ಕೆ ವಿಚಾರಣೆ ಮುಂದೂಡಿತ್ತು. ನಂತರ ನಿರೀಕ್ಷಣಾ ಜಾಮೀನಿನ ಆದೇಶವನ್ನು ಜ.5 ಕ್ಕೆ ಕಾಯ್ದಿರಿಸಿತ್ತು.

ಕಾಂಗ್ರೆಸ್ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಒಡೆತನದ ಕಲ್ಲೇಶ್ವರ ಮಿಲ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಜಿಂಕೆ, ಕಾಡು ಹಂದಿ ಸೇರಿ ಇತರೆ ಪ್ರಾಣಿಗಳನ್ನು ಅಕ್ರಮವಾಗಿ ಇಡಲಾಗಿದೆ ಎಂದು ಶಂಕಿಸಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಮಲ್ಲಿಕಾರ್ಜುನ್ ಗೆ ಸೇರಿದ ಕಲ್ಲೇಶ್ವರ ಮಿಲ್ ಗೆ ಒಟ್ಟು 20 ಕ್ಕೂ ಹೆಚ್ಚು ಅಧಿಕ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಧಿಡೀರ್ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಜೀವಂತ ಪ್ರಾಣಿಗಳು ಪತ್ತೆಯಾಗಿದ್ದವು.

ಕಾಂಗ್ರೆಸ್ ನಾಯಕ ಎಸ್.ಎಸ್. ಮಲ್ಲಿಕಾರ್ಜುನ ಬಂಧನಕ್ಕೆ ಆಗ್ರಹ
ರೈಸ್ ಮಿಲ್ ಆವರಣದಲ್ಲಿ ವನ್ಯಜೀವಿಗಳನ್ನು ಅಕ್ರಮವಾಗಿ ಸಾಕಾಣಿಕೆ ಮಾಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಈ ಕೂಡಲೇ ಬಂಧಿಸಿ, ಅಮಾಯಕರನ್ನು ಬಿಡುಗಡೆ ಮಾಡಿ ಎಂದು ಬಿಜೆಪಿ ಆಗ್ರಹಿಸಿತ್ತು.