ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ; 1,800 ಕೋಳಿಗಳ ಸಾವು
ಕೇರಳದಲ್ಲಿ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಕೋಯಿಕ್ಕೋಡ್ ಜಿಲ್ಲೆಯ ಫಾರ್ಮ್ವೊಂದರಲ್ಲಿ 1,800 ಕೋಳಿಗಳು ಸಾವನ್ನಪ್ಪಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಜಿಲ್ಲಾ ಪಂಚಾಯತಿ ನಿರ್ವಹಣೆಯಲ್ಲಿರುವ ಸ್ಥಳೀಯ ಫಾರಂನ ಕೋಳಿಗಳಲ್ಲಿ ಎಚ್5ಎನ್1 ಸೋಂಕು ಧೃಡಪಟ್ಟಿದೆ. ಕೇಂದ್ರ ಮಾರ್ಗಸೂಚಿಯಂತೆ ಹಕ್ಕಿ ಜ್ವರ ತಡೆಗಟ್ಟಲು ತುರ್ತಾಗಿ ಕ್ರಮ ಕೈಗೊಳ್ಳುವಂತೆ ಕೇರಳದ ಪಶುಸಂಗೋಪನಾ ಇಲಾಖೆ ಸಚಿವೆ ಜೆ.ಚಿಂಚುರಾಣಿ ನಿರ್ದೇಶನ ನೀಡಿದ್ದಾರೆ. ಸದ್ಯ ಕೋಳಿಗಳನ್ನು ಕೊಲ್ಲಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ.