ಕೆಂಪು ಟೊಪ್ಪಿ ಸರ್ಕಾರ ರಚಿಸಲು ಬಯಸುತ್ತಿರುವುದು ಯಾಕೆ ಗೊತ್ತಾ?ಸಮಾಜವಾದಿ ಪಕ್ಷಕ್ಕೆ ಪ್ರಧಾನಿ

ಕೆಂಪು ಟೊಪ್ಪಿ ಸರ್ಕಾರ ರಚಿಸಲು ಬಯಸುತ್ತಿರುವುದು ಯಾಕೆ ಗೊತ್ತಾ?ಸಮಾಜವಾದಿ ಪಕ್ಷಕ್ಕೆ ಪ್ರಧಾನಿ

ಲಕ್ನೋ: ಭಯೋತ್ಪಾದಕರಿಗೆ ಸಹಾನೂಭೂತಿ ತೋರಿಸಿ, ಅವರನ್ನು ಜೈಲಿನಿಂದ ಹೊರ ತರುವ ನಿಟ್ಟಿನಲ್ಲಿ ಕೆಂಪು ಟೊಪ್ಪಿ(ಸಮಾಜವಾದಿ ಪಕ್ಷ) ಉತ್ತರಪ್ರದೇಶದಲ್ಲಿ ಸರ್ಕಾರ ರಚಿಸಲು ಬಯಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಡಿಸೆಂಬರ್ 07) ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರಪ್ರದೇಶದ ಗೋರಖ್ ಪುರ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜನರಿಗೋಸ್ಕರ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಮಾಡಲು ಬದ್ಧರಾಗಿದ್ದೇವೆ. ಆ ನಿಟ್ಟಿನಲ್ಲಿ 9,600 ಕೋಟಿ ರೂಪಾಯಿ ವೆಚ್ಚದಲ್ಲಿ ಏಮ್ಸ್ ಮತ್ತು ಪ್ರಮುಖ ರಸಗೊಬ್ಬರ ಕಾರ್ಖಾನೆಯಂತಹ ಮೆಗಾ ಪ್ರಾಜೆಕ್ಟ್ ಮಾಡಲು ಬದ್ದರಾಗಿರುವುದಾಗಿ ಹೇಳಿದರು.

ಸಮಾಜವಾದಿ ಪಕ್ಷದ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕೆಂಪು ಟೊಪ್ಪಿ ಉತ್ತರಪ್ರದೇಶದ ಜನರಿಗೆ ರೆಡ್ ಅಲರ್ಟ್ ಆಗಿದೆ. ಕೆಂಪು ಟೊಪ್ಪಿಗೆ ನಿಮ್ಮ(ಜನರ) ನೋವು ಮತ್ತು ಸಮಸ್ಯೆಗಳಿಗೆ ಏನೂ ಮಾಡಿಲ್ಲ. ಕಾನೂನು ಬಾಹಿರ ಭೂಕಬಳಿಕೆ, ಹಗರಣ, ತಮ್ಮ ಖಜಾನೆ ತುಂಬಿಸಿಕೊಳ್ಳಲು ಮತ್ತು ಮಾಫಿಯಾಗಳಿಗೆ ಮುಕ್ತ ಸ್ವಾತಂತ್ರ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಕೆಂಪು ಟೊಪ್ಪಿ ಉತ್ತರಪ್ರದೇಶದಲ್ಲಿ ಸರ್ಕಾರ ರಚಿಸಲು ಬಯಸುತ್ತಿದೆ ಎಂದು ಟೀಕಿಸಿದರು.