ಕಾರ್ಮಿಕ ಕಾರ್ಡ್ ನೀಡೋದಾಗಿ ಮಹಿಳೆಯರಿಗೆ ವಂಚನೆ ಆರೋಪ.
ಗದಗ ಬ್ರೇಕಿಂಗ್ ಕಾರ್ಮಿಕ ಕಾರ್ಡ್ ನೀಡೋದಾಗಿ ಮಹಿಳೆಯರಿಗೆ ವಂಚನೆ ಆರೋಪ. ವಂಚನೆ ಮಾಡಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು. ಗದಗ ನಗರದ ಮಸಾರಿ ಪ್ರದೇಶದಲ್ಲಿ ಘಟನೆ. ಗ್ರಾಮೀಣ ಭಾಗದ ಮಹಿಳೆಯರನ್ನೆ ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡಿದ ವಂಚಕ. ಸ್ವರದ ಎಂಟರ್ಪ್ರೈಸ್ ಡೆವಲೆಪ್ ಲೈವ್ಲಿವುಡ್ ಫರ್ಮ್ ಸಂಸ್ಥೆಯಿಂದ ವಂಚನೆ. ಚಿತ್ರದುರ್ಗದ ಮೂಲದ ಸಂಸ್ಥೆಯ ನಿರ್ದೇಶಕ ಕುಮಾರ್ ಎನ್ನುವವನಿಗೆ ಏಳೆದಾಡಿ ಥಳಿಸಿದ ಸ್ಥಳೀಯರು. ಗದಗ ಜಿಲ್ಲೆಯ ಸಾವಿರಾರು ಕಾರ್ಮಿಕರಿಗೆ ಕಾರ್ಡ್ ಮಾಡೋದಾಗಿ ವಂಚನೆ. ಪ್ರತಿ ಕಾರ್ಡ್ ಗೆ 17 ನೂರು ರೂಪಾಯಿ ವಸೂಲಿ ಮಾಡಿ ವಂಚನೆ. ಕಾರ್ಮಿಕ ಕಾರ್ಡ್ ಮಾಡಿಸಿದ್ರೆ ವಿಶ್ವ ಸಂಸ್ಥೆಯಿಂದ ಹಣ ಬರುತ್ತೇ ಅಂತಾ ವಂಚನೆ. ಮಕ್ಕಳ ಶಿಕ್ಷಣ, ಮದುವೆ, ಅನಾರೋಗ್ಯ ಹಾಗೂ ಸರ್ಕಾರದಿಂದ ಹಣ ಬರುತ್ತೇ ಅಂತಾ ವಂಚನೆ. ನಂಬಿ ಮೋಸ ಹೋದ ನೂರಾರು ಮಹಿಳೆಯರು ವಂಚಕನಿಗೆ ಘೇರಾವ್.. ಸ್ಥಳಕ್ಕೆ ಡೌಡಾಯಿಸಿದ ಬಡಾವಣೆ ಪೊಲೀಸರಿಂದ ರಕ್ಷಣೆ. ಆಕ್ರೋಶಗೊಂಡ ಗ್ರಾಮೀಣ ಭಾಗದ ಜನರಿಂದ ಹಿಗ್ಗಾಮುಗ್ಗಾ ಥಳಿತ...