ಕಾರು ಅಪಘಾತದಲ್ಲಿ ಹಿರಿಯ ರಂಗಕಲಾವಿದ ನಾಡೋಜ `ಬೆಳಗಲ್ಲು ವೀರಣ್ಣ' ಸಾವು

ಕಾರು ಅಪಘಾತದಲ್ಲಿ ಹಿರಿಯ ರಂಗಕಲಾವಿದ ನಾಡೋಜ `ಬೆಳಗಲ್ಲು ವೀರಣ್ಣ' ಸಾವು

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೀರೆಹಳ್ಳಿ ಬಳಿ ಕಾರು ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಬೆಳಗಲ್ಲು ವೀರಣ್ಣ (91) ಅವರು ಮೃತಪಟ್ಟಿರುವ ಘಟನೆ ನಡೆದಿದೆ.

ಚಿತ್ರದುರ್ಗ ತಾಲೂಕಿನ ಹಿರೇಹಳ್ಳಿ ಬಳಿ ಇಂದು ಬೆಳಗ್ಗೆ ಕಾರುಅಪಘಾತ ಸಂಭವಿಸಿದ್ದು, ರಂಗಕಲಾವಿದ ಬೆಳಗಲ್ಲು ವೀರಣ್ಣ ಅವರು ನಿಧನರಾಗಿದ್ದಾರೆ.

ಕಾರಿನಲ್ಲಿದ್ದ ಬೆಳಗಲ್ಲು ವೀರಣ್ಣ ಅವರ ಪುತ್ರ ಹನುಮಂತಪ್ಪ ಅವರಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.