ಕಾರಿನಲ್ಲಿ ಹೋಗುತ್ತಿದ್ದಾಗಲೇ ಹೃದಯಾಘಾತ: ಖ್ಯಾತ ವಿಧಿ ವಿಜ್ಞಾನ ತಜ್ಞ ಡಾ. ಭಗವಾನ್‌ ಎಸ್‌. ಇನ್ನಿಲ್ಲ

ಕಾರಿನಲ್ಲಿ ಹೋಗುತ್ತಿದ್ದಾಗಲೇ ಹೃದಯಾಘಾತ: ಖ್ಯಾತ ವಿಧಿ ವಿಜ್ಞಾನ ತಜ್ಞ ಡಾ. ಭಗವಾನ್‌ ಎಸ್‌. ಇನ್ನಿಲ್ಲ

ಚಿಕ್ಕಬಳ್ಳಾಫುರ: ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹಿರಿಯ ವೈದ್ಯರಾಗಿರುವ, ಖ್ಯಾತ ವಿಧಿ ವಿಜ್ಞಾನ ತಜ್ಞ ಡಾ.

ಭಗವಾನ್‌ ಅವರು ಹೃದಯಾಘಾತದಿಂದ (Heart attack) ಮೃತಪಟ್ಟಿದ್ದಾರೆ. ಅವರು ಕಾರಿನಲ್ಲಿ ಹೋಗುತ್ತಿದ್ದಾಗಲೇ ಹೃದಯಾಘಾತವಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ ಐದು ವರ್ಷಗಳಿಂದ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಭಗವಾನ್ ಅವರು ಶುಕ್ರವಾರ ಸಂಜೆ ಕರ್ತವ್ಯ ಮುಗಿಸಿಕೊಂಡು ಬೆಂಗಳೂರಿನ ಮನೆಗೆ ತೆರಳುತ್ತಿದ್ದರು.

ಕಾರಿನಲ್ಲಿ ಅವರು ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಚಿಕ್ಕಬಳ್ಳಾಫುರ ತಾಲೂಕಿನ ಚದಲಪುರ ಗ್ರಾಮದ ಬಳಿ ಬರುತ್ತಿದ್ದಂತೆಯೇ ಹಿಂಬದಿ ಸೀಟಿನಲ್ಲಿದ್ದ ಭಗವಾನ್‌ ಚಡಪಡಿಸಲು ತೊಡಗಿದರು.

ತಲೆಸುತ್ತು ಬರುತ್ತಿದೆ, ಬೆವರು ಬರುತ್ತಿದೆ ಎಂದು ಚಾಲಕನಿಗೆ ಭಗವಾನ್‌ ಹೇಳಿದ್ದರು. ಇದನ್ನು ಕೇಳಿದ ಚಾಲಕ ಕಾರು ನಿಲ್ಲಿಸುವಷ್ಟರಲ್ಲಿ ಕಾರಿನಲ್ಲೇ ಡಾ.ಭಗವಾನ್ ಉಸಿರು ಕಳೆದುಕೊಂಡಿದ್ದರು.

ತಕ್ಷಣ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆ ತರಲಾಯಿತಾದರೂ ವೈದ್ಯರು ಪರೀಕ್ಷೆ ಮಾಡುವಷ್ಟರಲ್ಲಿ ಎಲ್ಲವೂ ಮುಗಿದಿತ್ತು.

ಭಗವಾನ್‌ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.