ಕಲಬುರಗಿಯಲ್ಲಿ KSRTC ಬಸ್ಸನ್ನೆ ಕದ್ದ ಖತರ್ನಾಕ್‌ ಕಳ್ಳರು : ನಕಲಿ ಕೀ ಬಳಸಿ ಕದ್ದ ಖದೀಮರು

ಕಲಬುರಗಿಯಲ್ಲಿ KSRTC ಬಸ್ಸನ್ನೆ ಕದ್ದ ಖತರ್ನಾಕ್‌ ಕಳ್ಳರು : ನಕಲಿ ಕೀ ಬಳಸಿ ಕದ್ದ ಖದೀಮರು

ಲಬುರಗಿ ಜಿಲ್ಲೆಯ ಚಿಂಚೋಳಿ ಬಸ್‌ ನಿಲ್ದಾಣದಲ್ಲಿ ನಕಲಿ ಕೀ ಬಳಸಿ ಕೆಎಸ್‌ಆರ್‌ಟಿಸಿ ಬಸ್ಸನ್ನೆ ಖತರ್ನಾಕ್‌ ಕಳ್ಳರು ಕದ್ದ ದುರಂತ ಘಟನೆ ಬೆಳಕಿಗೆ ಬಂದಿದೆ.ರಾಜ್ಯದಲ್ಲಿ ಕಳ್ಳರ ಹಾವಳಿ ಮಾತ್ರ ಕಮ್ಮಿಯೇನಿಲ್ಲ ದಿನ ಬೆಳಗಾದ್ರೆ ಒಂದಲ್ಲ ಒಂದು ರೀತಿಯಲ್ಲಿ ಖತರ್ನಾಕ್‌ ಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಅದರಲ್ಲೂ ಕೆಎಸ್‌ಆರ್‌ಟಿಸಿ ಬಸ್ಸನ್ನೇ ಕಳ್ಳತನ ಮಾಡಲು ಮುಂದಾದ ವಿಚಿತ್ರ ಘಟನೆ ಕಲಬುರಗಿ ಬೆಳಕಿಗೆ ಬಂದಿದ್ದು, ಚಿಂಚೋಳಿ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್‌ಆರ್‌ಟಿಸಿ ಬಸ್ಸನ್ನು ಮುಂಜಾನೆ 3.30ರ ವೇಳೆಗೆ ಕದ್ದೊಯ್ದಿದಿದ್ದಾರೆ ಎಂದು ತಿಳಿದು ಬಂದಿದ್ದಾರೆ.

KA38 F971ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್ಸಿಗೆ ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದಾರೆ. ಬಳ್ಳಾರಿಯ ಮಾರ್ಗದಲ್ಲಿ ಸಂಚರಿಸುವ ಬಸ್‌ ಎಂದು ತಿಳಿದು ಬಂದಿದೆ. ಈ ಘಟನೆ ಕೇಳಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಖತರ್ನಾಕ್‌ ಕಳ್ಳರ ಐಡಿಯಾ ಕಂಡು ಬೆಚ್ಚಿ ಬಿದ್ದಿದ್ದಾರೆ. ಇದೀಗ ಬಂದ ಸುದ್ದಿಯಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.