ಕರ್ನಾಟಕ ವಿಧಾನಸಭಾ ಚುನಾವಣೆ; ಕಾಂಗ್ರೆಸ್ ಟಿಕೆಟ್ಗಾಗಿ ಆಕಾಂಕ್ಷಿಗಳ ನಡುವೆ ಪೈಪೋಟಿ
ಕರ್ನಾಟಕ ವಿಧಾನಸಭಾ ಚುನಾವಣೆಗೆ ಹಲವು ಕ್ಷೇತ್ರಗಳ ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ನಡುವೆ ಒಳರಾಜಕೀಯ ಶುರುವಾಗಿದೆ. ನಂಜನಗೂಡು ಟಿಕೆಟ್ಗಾಗಿ ಮಹದೇವಪ್ಪ-ಧೃವನಾರಾಯಣ ನಡುವೆ ಪೈಪೋಟಿ ನಡೆಯುತ್ತಿದ್ದರೆ, ತೀರ್ಥಹಳ್ಳಿ ಟಿಕೆಟ್ಗೆ ಕಿಮ್ಮನೆ ರತ್ನಾಕರ್ ಅರ್ಜಿ ಸಲ್ಲಿಸಿದ್ದಾರೆ. ಅರಕಲಗೂಡು ಟಿಕೆಟ್ಗಾಗಿ ಡಿಕೆಶಿ ಬೆಂಬಲಿಗ ಶ್ರೀಧರ ಗೌಡ ಅರ್ಜಿ ಸಲ್ಲಿಸಿದ್ದು, ಸಿದ್ದು ಬೆಂಬಲಿಗ ಕೃಷ್ಣೇಗೌಡ ಕೂಡ ಆಕಾಂಕ್ಷಿಯಾಗಿದ್ದಾರೆ.