ತೆಲಂಗಾಣದ ಕೋಟೆಪಲ್ಲಿ 'ಅಣೆಕಟ್ಟಿನಲ್ಲಿಈಜಲು ತೆರಳಿದ, ಒಂದೇ ಕುಟುಂಬದ ನಾಲ್ವರು ನೀರುಪಾಲು'

ತೆಲಂಗಾಣದ ಕೋಟೆಪಲ್ಲಿ 'ಅಣೆಕಟ್ಟಿನಲ್ಲಿಈಜಲು ತೆರಳಿದ, ಒಂದೇ ಕುಟುಂಬದ ನಾಲ್ವರು ನೀರುಪಾಲು'

ತೆಲಂಗಾಣ : ವಿಕಾರಾಬಾದ್ ಜಿಲ್ಲೆಯ ಕೋಟೆಪಲ್ಲಿ ಅಣೆಕಟ್ಟಿನಲ್ಲಿಮುಂಜಾನೆ ಈಜಲು ತೆರಳಿದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯರ ಸಹಾಯದಿಂದ ನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ. ಮೃತರನ್ನು ಮಣ್ಣೆಗುಡ ನಿವಾಸಿಗಳಾದ ಲೋಕೇಶ್, ಜಗದೀಶ್, ವೆಂಕಟೇಶ್ ಮತ್ತು ರಾಜೇಶ್ ಎಂದು ಗುರುತಿಸಲಾಗಿದೆ.

ಪೊಲೀಸರು ಕುಟುಂಬದ ನಾಲ್ವರು ಸದಸ್ಯರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕಾರಾಬಾದ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.