ಇಬ್ಬರು ಮಕ್ಕಳ ತಾಯಿಗೆ ಬೆಂಕಿ ಹಚ್ಚಿದ ಲಿವ್‌ ಇನ್‌ ಪಾಲುದಾರ, ಚಿಕಿತ್ಸೆ ಫಲಿಸದೇ ಮಹಿಳೆ ಸಾವು

ಇಬ್ಬರು ಮಕ್ಕಳ ತಾಯಿಗೆ ಬೆಂಕಿ ಹಚ್ಚಿದ ಲಿವ್‌ ಇನ್‌ ಪಾಲುದಾರ, ಚಿಕಿತ್ಸೆ ಫಲಿಸದೇ ಮಹಿಳೆ ಸಾವು

ವದೆಹಲಿ: 28 ವರ್ಷದ ವಿವಾಹಿತೆ ಮಹಿಳೆಗೆ ಆಕೆಯ ಲಿವ್‌ ಇನ್‌ ಪಾಲುದಾರ ಬೆಂಕಿ ಹಚ್ಚಿದ್ದು, ಆಕೆ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಫೆಬ್ರವರಿ 11 ರಂದು ಮಹಿಳೆಯನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿತ್ತು.

ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿದ್ದಾಳೆ. ಮಹಿಳೆ ವಾಯುವ್ಯ ದೆಹಲಿಯ ಬಲ್ಬೀರ್ ವಿಹಾರ್ ನಿವಾಸಿಯಾಗಿದ್ದು, ಪಾದರಕ್ಷೆ ಕಾರ್ಖಾನೆಯೊಂದರಲ್ಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಳು. ಮಹಿಳೆಗೆ ಇಬ್ಬರು ಮಕ್ಕಳಿದ್ದು, ಆಕೆ ತನ್ನ ಪತಿಯನ್ನು ತೊರೆದು ಕಳೆದ ಆರು ವರ್ಷಗಳಿಂದ ಮೋಹಿತ್ ಎಂಬುವನೊಂದಿಗೆ ವಾಸಿಸುತ್ತಿದ್ದಳು.

ಫೆಬ್ರವರಿ 10 ರ ರಾತ್ರಿ ಮೋಹಿತ್ ತನ್ನ ಸ್ನೇಹಿತನೊಂದಿಗೆ ಡ್ರಗ್ಸ್ ಸೇವಿಸುತ್ತಿರುವುದನ್ನು ಕಂಡು ಮಹಿಳೆ ಮೋಹಿತ್ ಜೊತೆ ಜಗಳವಾಡಿದ್ದಾಳೆ. ಈ ವೇಳೆ, ಮೋಹಿತ್ ಆಕೆಯ ಮೇಲೆ ಟಾರ್ಪಿನ್ ಆಯಿಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಮೋಹಿತ್‌ನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.