ಇಂಕ್ರಿಮೆಂಟ್ ವಿಚಾರಕ್ಕೆ ಅಸಮಾಧಾನ; ಕಾನ್ಸ್ಟೇಬಲ್ ನಿಂದ ಆರ್ ಪಿ ಎಫ್ ಅಧಿಕಾರಿ ಹತ್ಯೆ

ಇಂಕ್ರಿಮೆಂಟ್ ವಿಚಾರಕ್ಕೆ ಅಸಮಾಧಾನ; ಕಾನ್ಸ್ಟೇಬಲ್ ನಿಂದ ಆರ್ ಪಿ ಎಫ್ ಅಧಿಕಾರಿ ಹತ್ಯೆ

ಹಾರಾಷ್ಟ್ರದ ಥಾಣೆಯ ಕಲ್ಯಾಣ್ ರೈಲ್ವೆ ಯಾರ್ಡ್‌ನಲ್ಲಿ ಆರ್‌ಪಿಎಫ್ ಕಾನ್ಸ್ಟೇಬಲ್ ನಿಂದ ಆರ್‌ಪಿಎಫ್ ಅಧಿಕಾರಿಯೊಬ್ಬರು ಹತ್ಯೆಯಾಗಿದ್ದಾರೆ.

ಆರೋಪಿಯನ್ನು ಪಂಕಜ್ ಯಾದವ್ ಎಂದು ಗುರುತಿಸಲಾಗಿದ್ದು, ಆತ ಅಧಿಕಾರಿ ಗಾರ್ಗ್ ಅವರನ್ನು ಹತ್ಯೆ ಮಾಡಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಪಂಕಜ್ ಯಾದವ್ ತನ್ನ ಇಂಕ್ರಿಮೆಂಟ್ ಅನ್ನು ನಿಲ್ಲಿಸಿದ್ದಕ್ಕಾಗಿ ಅಧಿಕಾರಿಯೊಂದಿಗೆ ಅಸಮಾಧಾನಗೊಂಡಿದ್ದ.

ಕೋಲ್ಸೆವಾಡಿ ಪೊಲೀಸ್ ಠಾಣೆ ಸಿಬ್ಬಂದಿ ಆತನನ್ನ ಮುಂಬೈ ಸಮೀಪದಲ್ಲಿ ಬಂಧಿಸಿದ್ದಾರೆ.