ಅವತಾರ್: ದಿ ವೇ ಆಫ್ ವಾಟರ್’ ಚಿತ್ರ ರಿಲೀಸ್; ಮೊದಲ ದಿನವೇ ಪೈರಸಿ ಕಾಟ

ವಿಶ್ವದ ಹಲವು ಭಾಷೆಗಳಿಗೆ ‘ಅವತಾರ್ 2’ ಸಿನಿಮಾ ಡಬ್ ಆಗಿದೆ. ಭಾರತದಲ್ಲಿ ಇಂಗ್ಲಿಷ್, ಕನ್ನಡ, ಹಿಂದಿ, ತಮಿಳು, ಮಲಯಾಳಂ & ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿದೆ ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಅಭಿಮಾನಿಗಳು ಸಿನಿಮಾ ನೋಡುತ್ತಿದ್ದಾರೆ. ಆದರೆ ಮೊದಲ ದಿನವೇ ಅನೇಕ ಪೈರಸಿ ವೆಬ್ಸೈಟ್ಗಳಲ್ಲಿ ಥಿಯೇಟರ್ ಪ್ರಿಂಟ್ ಲಭ್ಯವಾಗಿದೆ. ಪೈರಸಿ ಕಾಟ ಎಷ್ಟೇ ಇದ್ದರೂ ‘ಅವತಾರ್ 2’ ಚಿತ್ರದ ಬಿಸ್ನೆಸ್ಗೆ ಹೊಡೆತ ಬಿದ್ದಿಲ್ಲ. ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ