ಮೈಸೂರಲ್ಲಿ ಘೋರ ದುರಂತ : 'ಅಂಬುಲೆನ್ಸ್ ಬಾರದೆ 4 ದಿನದ ಹಸುಗೂಸು' ದುರ್ಮರಣ

ಮೈಸೂರಲ್ಲಿ ಘೋರ ದುರಂತ : 'ಅಂಬುಲೆನ್ಸ್ ಬಾರದೆ 4 ದಿನದ ಹಸುಗೂಸು' ದುರ್ಮರಣ

ಮೈಸೂರು : ಹೆಚ್.ಡಿ.ಕೋಟೆ ತಾಲೂಕಿನ ಬುಂಡನಮಾಳ ಗ್ರಾಮದಲ್ಲಿ ಸರಿಯಾದ ಸಮಯಕ್ಕೆ ಅಂಬುಲೆನ್ಸ್‌ ಬಾರದ ಕಾರಣಕ್ಕೆ 4 ದಿನದ ಹಸುಗೂಸು ಮೃತಪಟ್ಟದ ಘಟನೆ ನಡೆದಿದೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮದ ಶೀಲಾ ಮತ್ತು ಮಹದೇವಸ್ವಾಮಿ ದಂಪತಿಯ 4 ದಿನದ ಹಸುಗೂಸು ಬೇಗೂರು ಆಸ್ಪತ್ರೆಗೆ ಕರೆದೊಯ್ಯಲಾಗದೇ ಕೊನೆಯುಸಿರೆಳೆದಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಅಂಬುಲೆನ್ಸ್ ಸಿಬ್ಬಂದಿಗೆ ಕರೆ ಮಾಡಿದ್ದಕ್ಕೆ ಸೂಕ್ತ ಸ್ಪಂದನೆ ಸಿಗಲಿಲ್ಲ ಹಾಗಾಗಿ ಪೋಷಕರು ಮಗುವನ್ನು ಬೈಕಿನಲ್ಲಿಯೇ ಹೆಚ್.ಡಿ.ಕೋಟೆಗೆ ಆಸ್ಪತ್ರೆ ಕರೆದೊಯ್ದಲು ಯತ್ನಿಸಿದ್ದಾರೆ. ಆಗ ಅಂಬುಲೆನ್ಸ್‌ನಲ್ಲಿ ಬರುವುದನ್ನು ಗಮನಿಸಿ ಬೈಕ್‌ ನಿಲ್ಲಿಸಿದ್ರು. ಅಂಬುಲೆನ್ಸ್‌ನಲ್ಲಿ ಮೂಲಸೌಕರ್ಯ ಇಲ್ಲದೆ ಮಗು ನರಳಾಡಿದೆ. ಹೆಚ್.ಡಿ.ಕೋಟೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮಗು ಸಾವನ್ನಪ್ಪಿದೆ. ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.