ವಂಚನೆ ಪ್ರಕರಣ ನಡೆಸಲು ಅನೈತಿಕವಾಗಿ ವರ್ತಿಸುವಂತೆ ಹೇಳಿದ ಆರೋಪ; ಇನ್ಸ್ಪೆಕ್ಟರ್ಗೆ ಶಾಕ್ ನೀಡಿದ ಮಹಿಳೆ

ಬೆಂಗಳೂರು: ವಂಚನೆ ಪ್ರಕರಣ ನಡೆಸಲು ಮಂಚಕ್ಕೆ ಬರಲು ಕರೆದ ಆರೋಪದ ಮೇಲೆ ಇನ್ಸ್ಪೆಕ್ಟರ್ ಮೇಲೆ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಈ ಇನ್ಸ್ಪೆಕ್ಟರ್, ಬೆಂಗಳೂರಿನ ಕೊಡಿಗೆಹಳ್ಳಿಯವರಾಗಿದ್ದು ಅವರ ಮೇಲೆ ಮಹಿಳೆ ಯಲಹಂಕ ಎಸಿಪಿಗೆ ದೂರು ನೀಡಿದ್ದಾರೆ.
ಈ ಮಹಿಳೆ ಚಿಕ್ಕಮಗಳೂರು ಮೂಲದವರಾಗಿದ್ದು ಹಿಂದೆ ವಂಚನೆ ಪ್ರಕರಣವನ್ನ ಹೊತ್ತು ಕೊಡಿಗೆಹಳ್ಳಿ ಠಾಣೆಗೆ ಹೋಗಿದ್ದರು. ಈ ಮಹಿಳೆ, ಇನ್ಸ್ಪೆಕ್ಟರ್ ಮೊದಮೊದಲು ಕೇಸಿನ ಬಗ್ಗೆ ಮಾತನಾಡಿ ನಂತರ ಬೆಡ್ ರೂಂನ ಮಾತು ಆಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಇದರಿಂದಾಗಿ ಇನ್ಸ್ಪೆಕ್ಟರ್ ರಾಜಣ್ಣ ಸದ್ಯ ಸಸ್ಪೆಂಡ್ ಭೀತಿಯಲ್ಲಿದ್ದಾರೆ. ಸದ್ಯ ಪೊಲೀಸ್ ಆಯುಕ್ತರಿಗೆ ಅಮಾನತು ಮಾಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.