ಮಾದಕ ವ್ಯಸನ ಮುಕ್ತ ಭಾರತ ನಿರ್ಮಾಣದ ಗುರಿ ಹೊಂದಿದ್ದೇವೆ: ಅಮಿತ್ ಶಾ

ಬೆಂಗಳೂರು: ಮಾದಕ ವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಸಮ್ಮೇಳನ ನಡೆಯುತ್ತಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ ಮಾಡಿದ್ದಾರೆ.
ಮಾದಕ ವಸ್ತು ಮುಕ್ತ ಅಭಿಮಾಯನವನ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ಸದ್ಯದ ದಿನಗಳಲ್ಲಿ ಕೇಂದ್ರದ ನೀತಿಯಿಂದ ಎಲ್ಲಾ ಬದಲಾಗುತ್ತಿದೆ. ಮೊದಲು ದೇಶದಲ್ಲಿ ಮಾದಕ ಲೋಕದ ಜಾಲ ಬಹುಮಟ್ಟಿಗೆ ಇತ್ತು. ಆದರೆ ಇದೀಗ ಮಾದಕ ವಸ್ತುಗಳ ಬಳಕೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.