'ಬಿಜೆಪಿ ಸರ್ಕಾರದಲ್ಲಿ 60 ಸಾವಿರ ಕೋಟಿ ಹಗರಣ ನಡೆದಿದೆ' : ಎಂ. ಲಕ್ಷ್ಮಣ್ ಸ್ಪೋಟಕ ಹೇಳಿಕೆ

ಬೆಂಗಳೂರು : ಸಿಎಜಿ ವರದಿ ಪ್ರಕಾರ ಬಿಜೆಪಿ ಆಡಳಿತದ ಅವಧಿಯಲ್ಲಿ ಕಳೆದ ಮೂರುವರೆ ವರ್ಷಗಳಲ್ಲಿ ಸುಮಾರು 60 ಸಾವಿರ ಕೋಟಿಯಷ್ಟು ಹಣ ಏರುಪೇರಾಗಿದೆ. ಅಂದರೆ ಬಿಜೆಪಿ ಸರ್ಕಾರದಲ್ಲಿ 60 ಸಾವಿರ ಕೋಟಿಯಷ್ಟು ಹಗರಣವಾಗಿದೆ ಎಂದು ನೇರವಾಗಿ ಹೇಳಬಹುದೇ?
ಸಚಿವ ಮಾಧುಸ್ವಾಮಿ ಅವರ ಹೇಳಿಕೆ ಬಳಿಕ ಬಿಜೆಪಿ ನಾಯಕರೆಲ್ಲರೂ ಸುಳ್ಳನ್ನು 10 ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ! ಹಿಟ್ಲರ್ ಸರ್ಕಾರದಂತೆಯೇ ಬಿಜೆಪಿ ಸರ್ಕಾರದಲ್ಲೂ ಸುಳ್ಳು ಹೇಳುವುದಕ್ಕಾಗಿ ಸಿ.ಟಿ ರವಿ, ಅಸ್ವತ್ಥ್ ನಾರಾಯಣ್, ಅಶೋಕ್, ಸುಧಾಕರ್ ಜತೆಗೆ ಒಂದಿಬ್ಬರು ಶಾಸಕರನ್ನು ತಯಾರು ಮಾಡಲಾಗಿದೆ. ದೆಹಲಿ ಕಾರ್ಯಕಾರಣಿ ಸಭೆ ವೇಳೆ ಬೊಮ್ಮಾಯಿ ಅವರ ನಾಯಕತ್ವ ಬದಲಾಗಬೇಕೆಂದು 30 MLA ಸಹಿ ಮಾಡಿ ಪತ್ರ ಬರೆದಿದ್ದಾರೆ. ಇದನ್ನ ಬರೆದಿದ್ದು BSY ಅವರ ಬೆಂಬಲಿಗರು. BSY ಬೆಂಬಲಿಗರು ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಲು ಸಿದ್ಧರಿಲ್ಲದ ಕಾರಣ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗಿದೆ ಎಂದಿದ್ದಾರೆ.
ಯಡಿಯೂರಪ್ಪ ಅವರು ಇಷ್ಟು ದಿನ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ಇರುವುದಾಗಿ ಹೇಳುತ್ತಿದ್ದರು. ಆದರೀಗ ಪ್ರಜಾಧ್ವನಿ ಯಾತ್ರೆ ಬಳಿಕ ಸುಮ್ಮನಾಗಿದ್ದಾರೆ. ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು, ಯಡಿಯೂರಪ್ಪ ಅವರು ನಾನೊಂದು ತೀರಾ ನೀನೊಂದು ತೀರದಂತಾಗಿದ್ದಾರೆ ಎಂದಿದ್ದಾರೆ.