ಬಿಜೆಪಿ ಪ್ಪೋಸ್ಟರ್‌ಗಳ ಮೇಲೆ ರಾರಾಜಿಸಿದ "ಕಿವಿ ಮೇಲೆ ಹೂವ"

ಬಿಜೆಪಿ ಪ್ಪೋಸ್ಟರ್‌ಗಳ ಮೇಲೆ ರಾರಾಜಿಸಿದ "ಕಿವಿ ಮೇಲೆ ಹೂವ"

ಬೆಂಗಳೂರು: ಬಜೆಟ್‌ ಮಂಡನೆ ವೇಳೆ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಸಹಿತ ಹಲವು ನಾಯಕರು ಕಿವಿಯಲ್ಲಿ ಹೂವು ಇರಿಸಿ ಬಿಜೆಪಿ ಬಜೆಟ್‌ ಮೂಲಕ ಬಿಜೆಪಿ ಸರ್ಕಾರ ಜನರನ್ನು ಮೋಸ ಮಾಡುತ್ತಿದೆ ಎಂದು ವಿನೂತನವಾಗಿ ಪ್ರತಿಭಟನೆ ನಡೆಸಿದ್ದರು. ಇದರ ಮುಂದುವರಿದ ಭಾಗವಾಗಿ ಇದೀಗ ಬಿಜೆಪಿ ತನ್ನ ಸರ್ಕಾರದ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಅಳವಡಿಸಿದ್ದ ಬಿಜೆಪಿಯೇ ಭರವಸೆ ಎಂಬ ಪೋಸ್ಟರ್‌ಗಳ ಮೇಲೆ ಕಾಂಗ್ರೆಸ್‌ ಸಾಕಪ್ಪ ಸಾಕು ಕಿವಿ ಮೇಲೆ ಹೂವ ಎಂಬ ಪೋಸ್ಟರ್‌ಗಳನ್ನು ಅಂಟಿಸುವ ಅಭಿಯಾನ ಕೈಗೊಂಡಿದೆ.

ಈ ಮೂಲಕ ಸರ್ಕಾರ ಬಜೆಟ್‌ನಲ್ಲಿ ತಿಳಿಸಿದ ವಿಷಯಗಳು ಸುಳ್ಳು ಎಂಬುದನ್ನು ಜನತೆಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ. ಮಲ್ಲೇಶ್ವರಂನ ಬಿಜೆಪಿ ಕಚೇರಿ ಬಳಿಯಲ್ಲಿಯೂ ಬಿಜೆಪಿ ಪೋಸ್ಟರ್‌ಗಳ ಮೇಲೆ ಕಿವಿಮೇಲೆ ಹೂವ ಪೋಸ್ಟರ್‌ ರಾರಾಜಿಸುತ್ತಿದೆ.

ಈ ಹಿಂದೆ ರಾಜ್ಯ ಕಾಂಗ್ರೆಸ್‌ ನಾಯಕರು ಬಿಜೆಪಿ ಸರ್ಕಾರರ್ವನ್ನು 40 ಪರ್ಸೆಂಟ್‌ ಸರ್ಕಾರ ಎಂದು ದೂಷಿಸಿದ್ದರು. ಅಲ್ಲದೆ ಈ ಬಗ್ಗೆ ಸಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೈಗೊಂಡಿದ್ದನ್ನು ಸ್ಮರಿಸಬಹುದು. ಶುಕ್ರವಾರ ಬಜೆಟ್‌ ಮಂಡನೆ ಬಳಿಕ ಕಾಂಗ್ರೆಸ್‌ ಕಿವಿ ಮೇಲೆ ಹೂವ ಟ್ವೀಟ್‌ ಅಭಿಯಾನ ಕೈಗೊಂಡಿತ್ತು.