ಬಟ್ಟೆ ಹರಿದ ನಾಟಕವಾಡಿದ್ರಾ ಬಿಜೆಪಿ ಶಾಸಕ?: ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್‌

ಬಟ್ಟೆ ಹರಿದ ನಾಟಕವಾಡಿದ್ರಾ ಬಿಜೆಪಿ ಶಾಸಕ?: ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್‌

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಮೃತಪಟ್ಟ ವಿಚಾರ ತಿಳಿದು ಸ್ಥಳಕ್ಕೆ ಬಂದಿದ್ದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ಬಟ್ಟೆ ಹರಿದ ಪ್ರಕರಣ ಸಂಬಂಧ ಕಾಂಗ್ರೆಸ್‌ ತನಿಖೆಗೆ ಆಗ್ರಹಿಸಿದೆ. ಶಾಸಕರು ಗ್ರಾಮಸ್ಥರಿಂದ ತಪ್ಪಿಸಿಕೊಂಡು ಓಡಿ ಬಂದು ಜೀಪ್‌ ಹತ್ತುವಾಗ ಅವರ ಶರ್ಟ್ ಚೆನ್ನಾಗಿತ್ತು. ಆದರೆ, ಶಾಸಕರು ಹರಿದ ಬಟ್ಟೆಯಲ್ಲಿ ನೀಡಿದ ಹೇಳಿದ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಹಾಗಾದರೆ, ಬಟ್ಟೆ ಹರಿದಿದ್ದಾರೂ ಯಾರು? ಈ ಬಗ್ಗೆ ಸರಿಯಾದ ತನಿಖೆ ಆಗಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ