ದಿನಕ್ಕೆ 8 ಕೋಟಿ ರೂ. ಆದಾಯ ಗಳಿಸುವ ಶ್ರೀಮಂತ ಮಹಿಳೆ ರಾಧಾ ವೆಂಬು ಬಗ್ಗೆ ತಿಳಿಯಿರಿ

ದಿನಕ್ಕೆ 8 ಕೋಟಿ ರೂ. ಆದಾಯ ಗಳಿಸುವ ಶ್ರೀಮಂತ ಮಹಿಳೆ ರಾಧಾ ವೆಂಬು ಬಗ್ಗೆ ತಿಳಿಯಿರಿ

2023ರ ಎಂ3ಎಂ ಹುರುನ್ ಜಾಗತಿಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹುರುನ್ ಜಾಗತಿಕ ಶ್ರೀಮಂತರ ಪಟ್ಟಿಯ ಪ್ರಕಾರ ಸಾಫ್ಟ್‌ವೇರ್ ಮತ್ತು ಸೇವಾ ವಲಯದಲ್ಲಿ ರಾಧಾ ವೆಂಬು ಎರಡನೇ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಹಾಗೆಯೇ ಭಾರತದಲ್ಲಿ ತನ್ನ ಸ್ವಯಂ ಪ್ರಯತ್ನದಿಂದ ಸಾಫ್ಟ್‌ವೇರ್ ಉದ್ಯಮದಲ್ಲಿ ಶ್ರೀಮಂತೆಯಾದವರು ರಾಧಾ ವೆಂಬು ಆಗಿದ್ದಾರೆ.

ಹುರುನ್‌ ಪಟ್ಟಿಯಲ್ಲಿ ಬೈಜೂಸ್ ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್ ಕೂಡಾ ಒಬ್ಬರಾಗಿದ್ದಾರೆ. ರಾಧಾ ವೆಂಬು ಯಾರು?, ರಾಧಾ ವೆಂಬುವಿಗೆ ಜೊಹೊ ಸಂಸ್ಥಾಪಕ ಶ್ರೀಧರ್ ವೆಂಬು ಏನಾಗಬೇಕು, ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಸಾಫ್ಟ್‌ವೇರ್ ಸಂಸ್ಥೆಯಾದ ಜೊಹೊ ಸಹ ಸಂಸ್ಥಾಪಕ ರಾಧಾ ವೆಂಬು ಆಗಿದ್ದಾರೆ. ಶ್ರೀಧರ್ ವೆಂಬುರ ಸಹೋದರಿ ರಾಧಾ ವೆಂಬು ಆಗಿದ್ದಾರೆ. ತಮಿಳುನಾಡು ಮೂಲದ ಸಂಸ್ಥೆಯಾದ ಜೊಹೊದಲ್ಲಿ ರಾಧಾ ವೆಂಬು ಅತೀ ದೊಡ್ಡ ಸ್ಟೇಕ್‌ ಹೋಲ್ಡರ್‌ ಆಗಿದ್ದು, ಶೇಕಡ 47.8ರಷ್ಟು ಷೇರನ್ನು ಹೊಂದಿದ್ದಾರೆ. ರಾಧಾ ವೆಂಬುರ ಸಹೋದರ ಶ್ರೀಧರ್ ವೆಂಬು ಬರೀ ಶೇಕಡ 5ರಷ್ಟು ಷೇರನ್ನು ಹೊಂದಿದ್ದಾರೆ.

ಇತ್ತೀಚೆಗಷ್ಟೇ ಶ್ರೀಧರ್ ವೆಂಬುರ ವಿಚ್ಛೇದಿತ ಪತ್ನಿ ಪ್ರಮೀಳಾ ಶ್ರೀನಿವಾಸನ್, ತನ್ನ ಪತಿಯಾಗಿದ್ದ ರಾಧಾ ವೆಂಬು ತಮ್ಮ ಸಹೋದರಿ ಮತ್ತು ಅವರ ಪತಿಗೆ ಹೆಚ್ಚಿನ ಷೇರುಗಳನ್ನು ತನಗೆ ಹೇಳದೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಶ್ರೀಧರ್ ವೆಂಬು ಆರೋಪವನ್ನು ತಳ್ಳಿಹಾಕಿದ್ದಾರೆ. ರಾಧಾ ವೆಂಬುರ ಸಂಸ್ಥೆಯು 2700 ಕೋಟಿ ರೂಪಾಯಿಗೂ ಅಧಿಕ ಲಾಭವನ್ನು ಪಡೆದಿದ್ದಾರೆ. ವೆಂಬು ಕುಟುಂಬವು ಈ ಸಂಸ್ಥೆಯಲ್ಲಿ ಸುಮಾರು ಶೇಕಡ 80ರಷ್ಟು ಆದಾಯವನ್ನು ಹೊಂದಿದೆ.

ರಾಧಾ ವೆಂಬು ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ

ರಾಧಾ ವೆಂಬು ಐಐಟಿಯನ್ ಅಂದರೆ ಐಟಿಐನಲ್ಲಿ ಪದವಿ ಪಡೆದವರು ಆಗಿದ್ದಾರೆ. ರಾಧಾ ವೆಂಬು 1972ರಲ್ಲಿ ಜನಿಸಿದ್ದಾರೆ. ವೆಂಬು ತಂದೆ ಮದ್ರಾಸ್ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ರಾಧಾ ವೆಂಬು ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಐಐಟಿ) ಅಧ್ಯಯನ ಮಾಡಿದ್ದು ಇಂಡಸ್ಟ್ರೀಯಲ್ ಮ್ಯಾನೆಜ್‌ಮೆಂಟ್‌ ವಿಷಯದಲ್ಲಿ ಪದವಿ ಪಡೆದಿದ್ದಾರೆ. ರಾಧಾ ವೆಂಬು ಸಂಸ್ಥೆಯ ಜೊಯೊ ಮೇಲ್ ಅನ್ನು ನಿರ್ವಹಣೆ ಮಾಡುತ್ತಾರೆ.

ತಾನು ಅಧ್ಯಯನವನ್ನು ಮಾಡುತ್ತಿರುವ ಸಂದರ್ಭದಲ್ಲಿ 1996ರಲ್ಲಿ ತನ್ನ ಸಹೋದರ ಶ್ರೀಧರ್ ವೆಂಬು ಮತ್ತು ಶೇಖರ್ ವೆಂಬು ಜೊತೆ ಸೇರಿ ಉದ್ಯಮವೊಂದನ್ನು ರಾಧಾ ವೆಂಬು ಆರಂಭಿಸಿದ್ದಾರೆ. ಈ ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ಶೇಖರ್ ವೆಂಬು ಪಾತ್ರ ಕೂಡಾ ಅತೀ ಪ್ರಮುಖವಾಗಿದೆ. ಇನ್ನು ರಾಧಾ ವೆಂಬು ಕಳೆದ ವರ್ಷದಿಂದ 103 ಸ್ಥಾನಗಳನ್ನು ಪಡೆದು ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಎರಡನೇ ಶ್ರೀಮಂತ ಸ್ವಯಂ ನಿರ್ಮಿತ ಮಹಿಳೆಯಾಗಿದ್ದಾರೆ. ರಾಧಾ ವೆಂಬು ನಿವ್ವಳ ಆದಾಯವು 4 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಇದು ಸುಮಾರು 32,800 ಕೋಟಿ ರೂಪಾಯಿ ಆಗಿದೆ.

200 ಜನರ ಜುಹು ಮೇಲ್ಸ್ ಪ್ರೊಡೆಕ್ಟ್ ಮ್ಯಾನೆಜರ್‌ಗಳ ತಂಡದ ಮುಖ್ಯಸ್ಥೆ ರಾಧಾ ವೆಂಬು ಆಗಿದ್ದಾರೆ. ರಾಧಾ ವೆಂಬು ಚೆನ್ನೈನಲ್ಲಿದ್ದು, ಜುಹು ಕಚೇರಿ ಕೂಡಾ ಅಲ್ಲೇ ಇದೆ. ಟೆಕ್ಸಾನ್‌ನ ಆಸ್ಟೀನ್‌ನಲ್ಲಿ ಜುಹು ಸಂಸ್ಥೆಯ 375 ಎಕರೆಯ ಮುಖ್ಯ ಕಚೇರಿ ಇದೆ. ಒಟ್ಟು 6 ಕೋಟಿಗೂ ಅಧಿಕ ಬಳಕೆದಾರರನ್ನು ಸಂಸ್ಥೆ ಹೊಂದಿದೆ. ಜಾಗತಿಕವಾಗಿ 9 ರಾಷ್ಟ್ರಗಳಲ್ಲಿ ಇದರ ಬಳಕೆ ಮಾಡಲಾಗುತ್ತಿದೆ.

ರಾಧಾ ವೆಂಬುರ ಸಹೋದರ ಶ್ರೀಧರ್ ವೆಂಬುವಿಗೆ ಪದ್ಮಶ್ರೀ ಪ್ರಶಸ್ತಿ ಲಭ್ಯವಾಗಿದೆ. ಶ್ರೀಧರ್ ವೆಂಬು ಕೂಡಾ 1989ರಲ್ಲಿ ಐಐಟಿ ಮದ್ರಾಸ್‌ನಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ. ಯೂನಿವರ್ಸಿಟಿ ಆಫ್ ಪ್ರಿನ್‌ಸೆಟಾನ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಕ್ವಾಲ್‌ಕಾಮ್‌ನಲ್ಲಿ ಕಾರ್ಯನಿರ್ವಹಣೆ ಆರಂಭ ಮಾಡಿದ್ದಾರೆ. 2019ರಿಂದ ಶ್ರೀಧರ್ ವೆಂಬು ಭಾರತದಲ್ಲಿ ನೆಲೆಸಿದ್ದಾರೆ.