ತುಮಕೂರು ಶಾಸಕ ವಿರುದ್ಧ ಪೇಎಂಎಲ್‌ಎ ಅಭಿಯಾನ ಶುರು: ಕಾಂಗ್ರೆಸ್ ಮುಖಂಡನ ಬಂಧನ

ತುಮಕೂರು: ರಾಜ್ಯದೆಲ್ಲೆಡೆ ಮುಂದಿನ ಚುನಾವಣೆಗಾಗಿ ಭಾರೀ ರಣತಂತ್ರ ರೂಪಿಸುತ್ತಿದ್ದು, ಇದೀಗ ತುಮಕೂರು ಶಾಸಕ ವಿರುದ್ಧ ಪೇಎಂಎಲ್‌ಎ ಅಭಿಯಾನ(PayMLA campaign)ಶುರುಮಾಡಿಕೊಂಡಿದ್ದು, ಯುವ ಕಾಂಗ್ರೆಸ್ ಮುಖಂಡನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಕಳೆದ ವರ್ಷ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ 'ಪೇಸಿಎಂ' ಅಭಿಯಾನ ಆರಂಭಿಸಿತ್ತು. ಈ ಬೆನ್ನಲ್ಲೆ ಇದೀಗ ತುಮಕೂರಿನ ನಗರದೆಲ್ಲೆಡೆ ರಾತ್ರೋರಾತ್ರಿ ಪೇಎಂಎಲ್‌ಎ' ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಬಿಜೆಪಿ ಸರ್ಕಾರ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ಭಾರೀ ವಿರೋಧ ವ್ಯಕ್ತಪಡಿಸುತ್ತಿದೆ.
ಬಿಜೆಪಿ ಶಾಸಕ ಜಿಬಿ ಜ್ಯೋತಿಗಣೇಶ್ ಅವರ ಛಾಯಾಚಿತ್ರ ಮತ್ತು ಕ್ಯೂಆರ್ ಕೋಡ್ ಇರುವ ಪೋಸ್ಟರ್‌ಗಳು ಟೌನ್‌ಹಾಲ್, ಬಿ.ಎಚ್.ರೊಡ್, ಹೊರಪೇಟೆ ಸೇರಿದಂತೆ ಹಲವು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಪೋಸ್ಟರ್‌ನಲ್ಲಿ 'ನೀವು ಯಾವುದೇ ಕೆಲಸ ಮಾಡಲು ಬಯಸಿದರೆ, ಮೊದಲು ನನಗೆ ಪಾವತಿಸಿ' ಎಂದು ಬರೆಯಲಾಗಿದೆ . ಈ ಬೆನ್ನಲ್ಲೇ ಪೊಲೀಸರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಬಂಧಿಸಿದ್ದಾರೆ.