ತಂದೆಯ ಸಾಲಕ್ಕೆ ಮಗ ಶ್ಯೂರಿಟಿ ಕೊಟ್ಟಿದ್ದರೆ ಆತನೇ ಬಾಧ್ಯಸ್ಥ

ತಂದೆಯ ಸಾಲಕ್ಕೆ ಮಗ ಶ್ಯೂರಿಟಿ ಕೊಟ್ಟಿದ್ದರೆ ಆತನೇ ಬಾಧ್ಯಸ್ಥ

ಬೆಂಗಳೂರು: ತಂದೆ ಮಾಡಿದ ಸಾಲಕ್ಕೆ ಶ್ಯೂರಿಟಿಯಾಗಿ ಒಂದೊಮ್ಮೆ ಮಗ ಚೆಕ್‌ ಕೊಟ್ಟಿದ್ದರೆ ಆ ಸಾಲಕ್ಕೆ ಆತನೇ ಬಾಧ್ಯಸ್ಥನಾಗಲಿದ್ದಾನೆ ಎಂದು ಹೇಳಿರುವ ಹೈಕೋರ್ಟ್‌ ಸಾಲ ಮರುಪಾವತಿ ಮಾಡುವಂತೆ ಮಗನಿಗೆ ಆದೇಶಿಸಿದೆ.

ಈ ವಿಚಾರವಾಗಿ ದಾವಣಗೆರೆಯ ಪ್ರಸಾದ್‌ ರಾಯ್ಕರ್‌ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.

ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.

ಈ ಪ್ರಕರಣದಲ್ಲಿ ಆರೋಪಿ, ಮೃತ ವ್ಯಕ್ತಿಯ ಮಗನಾಗಿದ್ದಾರೆ, ಮೃತ ತಂದೆ ದೂರುದಾರರಿಂದ ಸಾಲ ಪಡೆದಿದ್ದಾರೆ ಮತ್ತು ಮರುಪಾವತಿಸಲು ಒಪ್ಪಿ, ಅದಕ್ಕೆ ಖಾತ್ರಿಯಾಗಿ ಚೆಕ್‌ಗಳನ್ನು ನೀಡಿದ್ದಾರೆ. ತಂದೆಯ ಕಾನೂನುಬದ್ಧ ವಾರಸುದಾರರಾಗಿರುವ ಪುತ್ರ ಸಾಲದ ಹಣವನ್ನು ನೆಗೋಷಿಯಬಲ್‌ ಇನ್ಸುಟ್ರಾಮೆಂಟ್‌ ಕಾಯ್ದೆ ಪ್ರಕಾರ ಮರುಪಾವತಿ ಮಾಡಲೇಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಅಲ್ಲದೆ, ನಿಯಮದಂತೆ ಸಾಲಕ್ಕೆ ಖಾತ್ರಿ ನೀಡಿರುವವರು (ಗ್ಯಾರಂಟರ್‌) ಹೇಗೆ ಬಾಧ್ಯಸ್ಥರಾಗುತ್ತಾರೋ ಅಂತೆಯೇ, ಚೆಕ್‌ ನೀಡಿದ ಪುತ್ರನೂ ಬಾಧ್ಯಸ್ಥನಾಗುತ್ತಾನೆ ಎಂದು ಹೇಳಿರುವ ನ್ಯಾಯಪೀಠ, ಹಣ ಮರುಪಾವತಿ ಮಾಡುವಂತೆ ದಾವಣಗೆರೆಯ ಜೆಎಂಎಫ್‌ಸಿ ಕೋರ್ಟ್‌ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.