ಚಹಾ ಮಾರಿಕೊಂಡು ಕೋಟ್ಯಾಧಿಪತಿಯಾದ ಯುವಕನಿಂದ 90 ಲಕ್ಷ ಮೌಲ್ಯದ ಕಾರು ಖರೀದಿ : ಫೋಸ್ಟ್‌ ವೈರಲ್

ಚಹಾ ಮಾರಿಕೊಂಡು ಕೋಟ್ಯಾಧಿಪತಿಯಾದ ಯುವಕನಿಂದ 90 ಲಕ್ಷ ಮೌಲ್ಯದ ಕಾರು ಖರೀದಿ : ಫೋಸ್ಟ್‌ ವೈರಲ್

ಭೋಪಾಲ್: ಏನಾದರೂ ಸಾಧಿಸಬೇಕೆಂದರೆ ನಿರಂತರ ಪರಿಶ್ರಮ, ಛಲವಿರಲೇಬೇಕು. ಇವತ್ತು ಮಾಡುವ ಕೆಲಸ ಸಣ್ಣದಾದರೆ ಏನು, ಇದೇ ಕೆಲಸ ನಾಳೆ ನಮ್ಮನ್ನು ದೊಡ್ಡಮಟ್ಟದಲ್ಲಿ ಮುಂದೆ ಬರಲು ಸಹಾಯ ಮಾಡಬಹುದು.

ಈ ಮಾತು ಅಹಮದಾಬಾದ್ ನಲ್ಲಿ ತನ್ನ ಎಂಬಿಎ ಪದವಿಯನ್ನು ಬಿಟ್ಟು ಚಹಾದಂಗಡಿಯನ್ನಿಟ್ಟು ಇಂದು ಕೋಟ್ಯಾಧಿಪತಿಯಾಗಿ 90 ಲಕ್ಷ ಮೌಲ್ಯದ ಕಾರನ್ನು ಖರೀದಿಸಿದ ಪ್ರಫುಲ್ ಬಿಲ್ಲೋರ್ ನಿಗೆ ಸಾಟಿಯಾಗುತ್ತದೆ.

2017 ರಲ್ಲಿ ಎಂಬಿಎ ಪದವಿಯನ್ನು ಬಿಟ್ಟು ಕಾಲೇಜಿನ ಬಳಿಯೇ ಬರೀ 8 ಸಾವಿರ ರೂಪಾಯಿಯನ್ನು ಕಿಸೆಯಲ್ಲಿ ಹಿಡಿದುಕೊಂಡು ರಸ್ತೆ ಬದಿ ಒಂದು ಸಣ್ಣ ಗಾಡಿಯಲ್ಲಿ ಚಹಾ ಮಾರಲು ಆರಂಭಿಸಿದ ಪ್ರಫುಲ್‌ ಇಂದು ಬಿಲಿಯನೆರ್ ಆಗಿದ್ದಾರೆ. ʼಎಂಬಿಎ ಚಾಯಿವಾಲʼ ಎನ್ನುವ ಹೆಸರಿನ ಇವರ ಚಹಾದಂಗಡಿಯ ಶಾಖೆ 100 ಕ್ಕೂ ಹೆಚ್ಚಿನ ಕಡೆಗಳಲ್ಲಿ ಇದೆ.

ಇತ್ತೀಚೆಗೆ ಪ್ರಫುಲ್‌ 90 ಲಕ್ಷ ರೂಪಾಯಿ ಮೌಲ್ಯದ ಮರ್ಸಿಡಿಸ್ ಬೆಂಜ್ ದುಬಾರಿ ಎಸ್‌ ಯುವಿ ಕಾರನ್ನು ಖರೀದಿಸಿದ್ದಾರೆ. ಕಾರನ್ನು ತನ್ನ ಸಹೋದರ ಹಾಗೂ ಸಂಬಂಧಿಕರ ಜೊತೆ ಹೋಗಿ ಶೋರೂಂನಲ್ಲಿ ಖರೀದಿಸಿದ ವಿಡಿಯೋ ಹಾಗೂ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

ಲಕ್ಷಕ್ಕೂ ಅಧಿಕ ಮಂದಿ ಪೋಸ್ಟ್‌ ಲೈಕ್‌ ಮಾಡಿ ʼಎಂಬಿಎ ಚಾಯಿವಾಲʼ ನಿಗೆ ಕಂಗ್ರಾಟ್ಸ್‌ ಎಂದಿದ್ದಾರೆ.

ಪ್ರಫುಲ್‌ ಸ್ಫೂರ್ತಿದಾಯಕ ಮಾತುಗಾರ, ಹೂಡಿಕೆದಾರ , ಕಂಟೆಂಟ್‌ ಕ್ರಿಯೇಟರ್‌ ಆಗಿ ಯಶಸ್ವಿ ಉದ್ಯಮಿಯಾಗಿದ್ದಾರೆ.