ಕೊಪ್ಪಳದಲ್ಲಿ ನಿಲ್ಲದ 'ದಲಿತರ ಮೇಲೆ ದೌರ್ಜನ್ಯ' : ಮಹಿಳೆಯ ಮೇಲೆ 'ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿತ

ಕೊಪ್ಪಳದಲ್ಲಿ ನಿಲ್ಲದ 'ದಲಿತರ ಮೇಲೆ ದೌರ್ಜನ್ಯ' : ಮಹಿಳೆಯ ಮೇಲೆ 'ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿತ

ಕೊಪ್ಪಳ : ಕನಕಗಿರಿ ತಾಲೂಕಿನ ರಾಂಪುರ ಗ್ರಾಮದಲ್ಲಿಹೊಲದಲ್ಲಿ ದಲಿತ ಮಹಿಳೆಯ ಮೇಲೆ ಮೇಲ್ಜಾತಿ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹೊಡೆದಹಲ್ಲೆಗೈದ ದುರಂತ ಘಟನೆ ಬೆಳಕಿಗೆ ಬಂದಿದೆ. ದನ ತೋಟಕ್ಕೆ ನುಗ್ಗಿತೆಂಬ ಕಾರಣಕ್ಕೆ ಈ ರೀತಿ ದೌರ್ಜನ್ಯ ತೋರಲಾಗಿದೆ ಎಂದು ತಿಳಿದುಬಂದಿದೆ.

ಶೋಭಮ್ಮ ಎಂಬ ಮಹಿಳಾ ಹರಿಜನರ ಹಸುವೊಂದು ಅಮರೇಶಪ್ಪ ಕುಂಬಾರ ಎಂಬುವರ ತೋಟಕ್ಕೆ ನುಗ್ಗಿದೆ ಎಂಬ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, 30 ವರ್ಷದ ದಲಿತ ಮಹಿಳೆ ಶೋಭಮ್ಮ ಎಂಬವರಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಹೊಡೆಯುವ ಮೂಲಕ ಹಲ್ಲೆಗೈದಿದ್ದಾರೆ, ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಕೂಡ ಆಗಿದೆ.

ಗಂಭೀರ ಗಾಯಗೊಂಡ ಮಹಿಳೆಯನ್ನು ಕೂಡಲೇ ಕೊಪ್ಪಳದ ಗಂಗಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಈ ಘಟನೆ ಫೆಬ್ರುವರಿ 3ರಂದು ನಡೆದಿದೆ ಎಂದು ತಿಳಿಯಲಾಗಿದೆ. ಎಸ್​ಸಿ ಎಸ್​ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿಯಲ್ಲಿಕನಕಗಿರಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.