ಕೆಜಿಎಫ್' ನಟ ಯಶ್‌ ಎಷ್ಟು ಕೋಟಿ ಒಡೆಯ ಗೊತ್ತಾ ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಕೆಜಿಎಫ್' ನಟ ಯಶ್‌ ಎಷ್ಟು ಕೋಟಿ ಒಡೆಯ ಗೊತ್ತಾ ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಟ ಯಶ್‌ ಕನ್ನಡ ಸಿನಿರಂಗದ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ. 'ಕೆಜಿಎಫ್' ಸರಣಿ ಸಿನಿಮಾ ಬಳಿಕ ವಿಶ್ವದಾದ್ಯಂತ ಯಶ್ (KGF actor Yash) ಸದ್ದು ಮಾಡುತ್ತಿದ್ದಾರೆ. ರಾಕಿ ಭಾಯ್‌ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ, ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ.

ನಟ ಯಶ್‌ಗೆ ‘ಕೆಜಿಎಫ್’ ಸಿನಿಮಾ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿರುತ್ತದೆ. ಯಶ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾವೇ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದ್ದಿತ್ತು. ಇನ್ನು ನಂತರ ಬಂದ ‘ಕೆಜಿಎಫ್ 2’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. ಇಂದು (ಜನವರಿ 8) ಯಶ್ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ತಮ್ಮ 19ನೇ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿರುವ ಸಂಸ್ಥೆಯ ಹೆಸರು ರಿವೀಲ್ ಆಗಿದೆ.

ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಡಬಹುದು ಎಂದು ಯಶ್ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಅದರಂತೆ ದುಬೈ ಪ್ರವಾಸದಲ್ಲಿ ಇದ್ದರೂ, ಅಭಿಮಾನಿಗಳಿಗೆ ನಿರಾಸೆ ಮಾಡಿಲ್ಲ. ‘ಕೆಜಿಎಫ್’ ಯಶಸ್ಸಿನ ಬಳಿಕ ಯಶ್ ಪಡೆಯುವ ಸಂಭಾವನೆ, ಆಸ್ತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದೆ. ಕೆಜಿಎಫ್’ ಸಿನಿಮಾ ಯಶಸ್ಸಿನ ಬಳಿಕ ರಾಕಿ ಭಾಯ್ ರೇಂಜ್ ಬದಲಾಗಿದೆ. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಯಶ್‌ಗಾಗಿ ಕ್ಯೂ ನಿಂತಿದ್ದೂ ಇದೆ. ಆದರೆ, ‘ಕೆಜಿಎಫ್’ ಯಶಸ್ಸಿನ ಬಳಿಕವೇ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಅನ್ನೊ ಮಾತು ಸಿನಿರಂಗದಲ್ಲಿ ಕೇಳಿಬರುತ್ತಿವೆ.

‘ಕೆಜಿಎಫ್ 2’ ಸಿನಿಮಾದಿಂದ ಯಶ್‌ಗೆ ಬರೋಬ್ಬರಿ 30 ಕೋಟಿ ರೂ. ಸಂಭಾವನೆ ಹಾಗೂ ಲಾಭದಲ್ಲಿ ಶೇರ್ ಮಾಡಿದ್ದರು ಎಂದು ಝೂಮ್ ವರದಿ ಮಾಡಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸ್ವತ: ಯಶ್ ಅದರ ಬಗ್ಗೆ ಹಂಚಿಕೊಂಡಿದ್ದರು. ರಾಕಿಂಗ್ ಸ್ಟಾರ್ ಯಶ್ ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಸಮೀಪ ಡ್ಯೂಪ್ಲೆಕ್ಸ್ ಫ್ಲ್ಯಾಟ್ ಅನ್ನು ಖರೀದಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಆ ಫ್ಲ್ಯಾಟ್‌ನ ಗೃಹಪ್ರವೇಶ ಕೂಡ ನಡೆದಿತ್ತು. ಈ ಡ್ಯೂಪ್ಲೆಕ್ಸ್ ಫ್ಲ್ಯಾಟ್‌ನ ಬೆಲೆ ಬರೋಬ್ಬರಿ 4 ಕೋಟಿ ರೂ. ಎಂದು ವರದಿ ಆಗಿದೆ. ಹಲವು ಐಶಾರಾಮಿ ಸವಲತ್ತು ಈ ಫ್ಲ್ಯಾಟ್‌ನಲ್ಲಿ ಇದೆ ಎಂದು ಹೇಳಲಾಗಿದೆ. ಈ ಫ್ಲ್ಯಾಟ್‌ನ್ನು ‘ಕೆಜಿಎಫ್’ ಸಿನಿಮಾ ಬಳಿಕ ಖರೀದಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಯಶ್ ಬೇರೆ ಬೇರೆ ಕಡೆ ಮನೆ ಇರುತ್ತದೆ. ಪಿಇಎಸ್ ಕಾಲೇಜು ಸಮೀಪ ಭವ್ಯ ಬಂಗಲೆಯಿದ್ದು, ಇದರಲ್ಲಿ ಅವರ ತಂದೆ-ತಾಯಿ ವಾಸವಿದ್ದಾರೆ. ಈ ಮನೆಯನ್ನು ಯಶ್‌ ‘ರಾಜಹುಲಿ’ ಗೆದ್ದ ಸಂದರ್ಭದಲ್ಲಿ ಖರೀದಿ ಮಾಡಿದ್ದರು ಅನ್ನೋ ಮಾತು ಕೇಳಿಬಂದಿತ್ತು. ಹಾಗೇ ಹಾಸನದ ತಿಮ್ಮಲಾಪುರ ಸಮೀಪ ಯಶ್ ಜಮೀನನ್ನು ಖರೀದಿ ಮಾಡಿದ್ದು, ಸದ್ಯ ಅದನ್ನು ಅವರ ತಂದೆ-ತಾಯಿ ನೋಡಿಕೊಳ್ಳುತ್ತಿದ್ದಾರೆ.ನಟ ಯಶ್ ಬಳಿ ಹಲವು ಐಶಾರಾಮಿ ಕಾರುಗಳು ಇದೆ. ಮರ್ಸಿಡೀಸ್ ಬೆಜ್ಜ್‌ನಿಂದ ಹಿಡಿದು ಔಡಿ, ಬಿಎಂಡಬ್ಲ್ಯೂ ಸೇರಿದಂತೆ ಹಲವು ದುಬಾರಿ ಕಾರುಗಳು ಯಶ್ ಬಳಿ ಇವೆ. ಪ್ರತಿಯೊಂದು ಜಾಹೀರಾತಿಗೂ ಯಶ್ 60 ರಿಂದ 70 ಲಕ್ಷ ಸಂಭಾವನೆ ಪಡೆಯುತ್ತಾರೆ. ಕೆಜಿಎಫ್ ಚಾಪ್ಟರ್ 1 ವರೆಗೆ ಯಶ್ ಒಟ್ಟು ಆಸ್ತಿ 53 ಕೋಟಿ ರೂ. ಎನ್ನಲಾಗಿತ್ತು. ‘ಕೆಜಿಎಫ್ 2’ ಬಳಿಕ ಇದು ಗಣನೀಯವಾಗಿ ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಬಾಲಿವುಡ್‌ ವೆಬ್‌ಸ್ಟೈಟ್‌ಗಳು ವರದಿ ಮಾಡಿದೆ.