ಕಾಂಗ್ರೆಸ್ ತೊರೆದಿದ್ದ M.M ಹಿರೇಮಠ್ ಗೆ ಬಿಗ್ ಶಾಕ್ : 'SC' ಪ್ರಮಾಣಪತ್ರ ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ
ಹಾವೇರಿ : ಎಸ್ ಸಿ ಜಾತಿ ( ಬೇಡ ಜಂಗಮ ) ಪ್ರಮಾಣ ಪತ್ರ ಪಡೆದಿದ್ದ ಎಂ, ಎಂ ಹಿರೇಮಠ್ ಗೆ ಜಿಲ್ಲಾಡಳಿತ ಶಾಕ್ ನೀಡಿದ್ದು, ಜಾತಿ ಪ್ರಮಾಣ ಪತ್ರವನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.
ಹಾವೇರಿ ಎಸ್ ಸಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ ಎಂ ಹಿರೇಮಠ್ ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲದ್ದರಿಂದ ತಮ್ಮ ಜಿಲ್ಲಾಧ್ಯಕ್ಷ ಸ್ಥಾನ ಹಾಗೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಜಾತಿ ಪ್ರಮಾಣ ಪತ್ರ ರದ್ದು ಮಾಡಿ ಹಾವೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಈ ಮೂಲಕ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದ ಹಿರೇಮಠ್ ಗೆ ಬಿಗ್ ಶಾಕ್ ತಗುಲಿದೆ. ಅಲ್ಲದೇ ಇಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬೆಂಬಲಿಗರ ಜತೆ ಸಭೆ ನಡೆಸಿದ್ದರು.
SDPI ಮುಖಂಡನ ವಿರುದ್ಧ ದೂರು
ಶಾಂತಿ ಕದಡುವ, ದ್ವೇಷ ಹರಡುವ ಮತ್ತು ಮಾನಹಾನಿ ಮಾಡುವ ಉದ್ದೇಶದ ಹೇಳಿಕೆ ಕೊಟ್ಟ ಚಿತ್ರದುರ್ಗ ಜಿಲ್ಲಾ ಎಸ್ಡಿಪಿಐ ಅಧ್ಯಕ್ಷ ಜಾಕೀರ್ ಹುಸೇನ್ ವಿರುದ್ಧ ಇನ್ನೊಂದು ದೂರು ಸಲ್ಲಿಸಲಾಯಿತು.ಮುಸ್ಲಿಮರ ಮೀಸಲಾತಿ ರದ್ದು ಮಾಡಿದ ಸಂಬಂಧ ಪ್ರತಿಭಟನೆಯಲ್ಲಿ ಮಾತನಾಡಿದ ಜಾಕೀರ್ ಹುಸೇನ್ ಅವರು, 'ನಮ್ಮ ಹಕ್ಕನ್ನು ಹೀನಾಯವಾಗಿ ಕಸಿದುಕೊಳ್ಳಲಾಗಿದೆ. ನಮ್ಮ ಹಕ್ಕನ್ನು ವಾಪಸ್ ಕೊಡದಿದ್ದರೆ ಸಿಎಂ ಬೊಮ್ಮಾಯಿಯವರ ಬಟ್ಟೆ ಬಿಚ್ಚಿಸುತ್ತೇವೆ; ಹಿಜಾಬ್, ಆಜಾನ್ಗೆ ತಲೆ ಕೊಟ್ಟೆವು. ಮೀಸಲಾತಿ ವಿಚಾರದಲ್ಲಿ ತಲೆ ಹೋದರೂ ಚಿಂತೆಯಿಲ್ಲ. ಜೈಲಿಗೆ ಹೋದರೂ ಚಿಂತೆಯಿಲ್ಲ. ನಾವೆಲ್ಲ ಉಗ್ರವಾಗಿ ಹೋರಾಡುತ್ತೇವೆ' ಎಂದು ಹೇಳಿದ್ದರು ಎಂದು ಗಮನ ಸೆಳೆಯಲಾಗಿದೆ.ಸಾಮಾಜಿಕ ಶಾಂತಿಗೆ ಹಾನಿ ಉಂಟು ಮಾಡುವ ಮತ್ತು ದ್ವೇಷ ಹರಡುವ ಉದ್ದೇಶದ ಈ ಮಾತುಗಳನ್ನು ಗಮನಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಮನವಿಯಲ್ಲಿ ಕೋರಲಾಗಿದೆ.