'KSRTC' ಯ ಮೊದಲ ಎಲೆಕ್ಟ್ರಿಕ್ ಬಸ್ ಗೆ ಇಂದು ಅಧಿಕೃತ ಚಾಲನೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿದ್ಯುತ್ ಚಾಲಿತ ಬಸ್ ಗಳ ಸಂಚಾರ ಆರಂಭವಾಗಿದ್ದು, ಜ.13 ರಂದು ಪ್ರಾಯೋಗಿಕವಾಗಿ ಬೆಂಗಳೂರು ಟು ರಾಮನಗರ ನಡುವೆ ಪ್ರಾಯೋಗಿಕ ಸಂಚಾರ ನಡೆಸಿತ್ತು. ಈ ಬಳಿಕ ಇಂದಿನಿಂದ ಬೆಂಗಳೂರು ಟು ಮೈಸೂರಿಗೆ ಇವಿ ಪ್ಲಸ್ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭವಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣ ದಲ್ಲಿ ಮೊದಲ ಇವಿ ಬಸ್, ಪ್ರಯಾಣಿಕರನ್ನು ಕರೆದುಕೊಂಡು ಮೈಸೂರಿಗೆ ಪ್ರಯಾಣ ಆರಂಭಿಸಿದೆ. ಇಂದು ಬೆಳಗ್ಗೆ 6.45ಕ್ಕೆ ಬಸ್ಗೆ ಚಾಲನೆ ಸಿಕ್ಕಿದ್ದು, ಮೈಸೂರಿಗೆ 8.45 ಕ್ಕೆ ತಲುಪಲಿದೆ