ಹೊಸ ರೋಲ್ ಜೊತೆ ಬರೋಬ್ಬರಿ 10 ವರ್ಷಗಳ ಬಳಿಕ IPLಗೆ ಶ್ರೀಶಾಂತ್ ಮತ್ತೆ ಕಂಬ್ಯಾಕ್..!

ಹೊಸ ರೋಲ್ ಜೊತೆ ಬರೋಬ್ಬರಿ 10 ವರ್ಷಗಳ ಬಳಿಕ IPLಗೆ ಶ್ರೀಶಾಂತ್ ಮತ್ತೆ ಕಂಬ್ಯಾಕ್..!

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾಗಿದ್ದ ಎಸ್​.ಶ್ರೀಶಾಂತ್ ಕ್ರಿಕೆಟ್ ಬದುಕಿಗೆ ಫುಲ್​ಸ್ಟಾಪ್ ಬಿದ್ದಾಗಿದೆ. 2013ರಲ್ಲಿ ನಡೆದ ಐಪಿಎಲ್​ ಸ್ಪಾಟ್​-ಫಿಕ್ಸಿಂಗ್ ಪ್ರಕರಣದ ನಂತರ ಶ್ರೀಶಾಂತ್, ಕ್ರಿಕೆಟ್ ಬದುಕಿನಿಂದ ದೂರ ಇರಬೇಕಾದ ಅನಿವಾರ್ಯತೆಯನ್ನು ತಾವೇ ಸೃಷ್ಟಿಸಿಕೊಂಡಿದ್ದರು.

ಸಿನಿಮಾ, ಕಿರುತೆರೆಗಳ ಟಿವಿ ಶೋಗಳ ಮೂಲಕ ರಂಜಿಸುತ್ತಿರುವ ಶ್ರೀಶಾಂತ್, ಇದೀಗ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬರೋಬ್ಬರಿ 10 ವರ್ಷಗಳ ಕಾಲ ಮತ್ತೆ ಐಪಿಎಲ್​ ಟೂರ್ನಿಗಳಲ್ಲಿ ಶ್ರೀಶಾಂತ್ ಕಾಣಿಸಿಕೊಳ್ಳಲಿದ್ದಾರೆ.

ಹೌದು.. 2023ರ ಐಪಿಎಲ್​​ ಹಬ್ಬಕ್ಕೆ ಕೇವಲ 2 ವಾರಗಳು ಮಾತ್ರ ಬಾಕಿ ಇದೆ. ಈ ಮೆಗಾ ಟೂರ್ನಿಯಲ್ಲಿ ಶ್ರೀಶಾಂತ್ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಬಾರಿ ಯಾವುದೇ ತಂಡದ ಜರ್ಸಿ ಧರಿಸಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಟೂರ್ನಮೆಂಟ್ ಮ್ಯಾನೆಜ್ಮೆಂಟ್​​ನ ಎಕ್ಸ್​​ಪರ್ಟ್ ಆಗಲಿದ್ದಾರೆ.

ಐಪಿಎಲ್​ ಟೂರ್ನಿಗಳ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್​, ದೇಶದ ಪ್ರಮುಖ 9 ಭಾಷೆಗಳಲ್ಲಿ ಪ್ರಸಾರ ಮಾಡ್ತಿದೆ. ಇದೀಗ ಇನ್​​ಕ್ರೆಡಿಬಲ್ ಸ್ಟಾರ್​ಕಾಸ್ಟರ್ ಆಗಿ ಮೈಕ್ ಹಿಡಿಯುವವರ 80 ಜನರ ಪಟ್ಟಿಯ ಜೊತೆ ಪ್ರೊಮೋವನ್ನು ಬಿಡುಗಡೆ ಇದರಲ್ಲಿ ಶ್ರೀಶಾಂತ್​ ಹೆಸರು ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಜಾಕ್ ಕಾಲಿಸ್, ಅರೋನ್ ಫಿಂಚ್, ಕೆವಿನ್ ಪೀಟರ್ಸನ್, ಟಾಮ್ ಮೂಡಿ, ಇರ್ಫಾನ್ ಪಠಾಣ್, ಎಸ್​.ಶ್ರೀಶಾಂತ್, ಇರ್ಫಾನ್ ಪಠಾಣ್, ಪೌಲ್ ಕಾಲಿಂಗ್​ವುಡ್​, ಹರ್ಭಜನ್ ಸಿಂಗ್, ಮುರುಳಿ ವಿಜಯ್, ಮೊಹ್ಮದ್ ಕೈ ಮತ್ತು ಯೂಸೆಫ್​ ಪಠಾಣ್ ಕೂಡ ಸ್ಟಾರ್​​ಸ್ಫೋರ್ಟ್ಸ್ ಮೂಲಕ ಐಪಿಲ್ ಮೈಕ್ ಹಿಡಿಯಲಿದ್ದಾರೆ.