ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ಮೂರು ಮಕ್ಕಳ ಅಂಕಲ್: ಪೊಲೀಸ್‌ ಮೆಟ್ಟಿಲೇರಿದ ಮೊದಲ ಪತ್ನಿ

ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ಮೂರು ಮಕ್ಕಳ ಅಂಕಲ್: ಪೊಲೀಸ್‌ ಮೆಟ್ಟಿಲೇರಿದ ಮೊದಲ ಪತ್ನಿ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಹೆಂಡತಿಯ ಮೇಲೆ ಸಂಶಯಪಟ್ಟು ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ವಿಚಿತ್ರ ಘಟನೆ ನಡೆದಿದೆ.ಈತನಿಗೆ ಹೆಂಡತಿ ಇದ್ದರು ಅಪ್ರಾಪ್ತೆಗೆ ತಾಳಿ ಕಟ್ಟಿದ ಗಂಡನ ವಿರುದ್ದ ಪೊಲೀಸ್‌ ಮೆಟ್ಟಿಲೇರಿದ್ದಾಳೆ.

ಹಣದಾಸೆ ತೋರಿಸಿ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ಭೂಪನ ವಿರುದ್ಧ ಎರಡು ದೂರು ದಾಖಲಾಗಿವೆ.ಮಹದೇವ ನಗರ ನಿವಾಸಿಯಾಗಿರುವ ಹನಮಂತ ಉಪ್ಪಾರ ವಿರುದ್ಧ ಮೊದಲ‌ ಪತ್ನಿ ನೇತ್ರಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಇದಕ್ಕೆಲ್ಲ ಕಾರಣ ಹನಮಂತ ಉಪ್ಪಾರ ಮೊದಲ ಪತ್ನಿ ಬಿಟ್ಟು 17 ವರ್ಷದ ಬಾಲಕಿಗೆ ತಾಳಿ ಕಟ್ಟಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಹನಮಂತ ಉಪ್ಪಾರ ಹಣದಾಸೆ ತೋರಿಸಿ 17 ವರ್ಷದ ಬಾಲಕಿಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಇಡಕಲ್ ಪಡೆಪ್ಪನ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.
ಮೊದಲ ಹೆಂಡತಿ ಮೇಲೆ ಸಂಶಯ ಮಾಡಿ ಹನಮಂತ ಎರಡನೇ ಮದುವೆಯಾಗಿರೋದನ್ನ ವಿರೋಧಿಸಿ ನೇತ್ರಾ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.