ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ; ನಾಲ್ಕು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಎನ್ ಐಎ ನ್ಯಾಯಾಲಯದಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಈ ಕುರಿತು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಯುವಕನ ವಾಟ್ಸ್ ಆಪ್ ಸ್ಟೇಟಸ್ ವಿರುದ್ಧ ಒಂದು ಕೋಮಿಯ ಆಕ್ರೋಶಗೊಂಡು ಗಲಭೆ ಮಾಡಿದ್ದರು. ಏಪ್ರಿಲ್ ೧೬ ರಂದು ರಾತ್ರಿ ಹಳೇ ಹುಬ್ಬಳ್ಳಿ ಠಾಣೆ ಎದುರು ಜಮಾಯಿಸಿದ್ದ ಸಾವಿರಾರು ಜನರು ಯುವಕರನ್ನು ತಮಗೆ ಒಪ್ಪಿಸುವಂತೆ ಕೂಗಿ ಕಿರುಚಾಡಿ ಠಾಣೆ ಮೇಲೆ ಕಲ್ಲು ಎಸೆದಿದ್ದರು. ಜೊತೆಗೆ ಆಸ್ಪತ್ರೆ , ದೇವಸ್ಥಾನ , ಮನೆಗಳ ಮೇಲೆ ಸಹ ಕಲ್ಲೂ ತೂರಾಟ ನಡೆಸಿದ್ದರು ಹೀಗಾಗಿ ಇದರಿಂದ ಗಲಭೆ ಉಂಟಾಗಿತ್ತು. ಈ ಘಟನೆಯ ವೇಳೆ ಪೊಲೀಸ್ ಅಧಿಕಾರಿ ಸೇರಿ ಎಂಟು ಪೊಲೀಸರಿಗೆ ಗಾಯವಾಗಿತ್ತು.