ಸ್ಯಾಂಡಲ್ ವುಡ್ ನಟಿ ತಾರಾ ಕಾರು ಚಾಲಕನ ವಿರುದ್ಧ FIR ದಾಖಲು

ಸ್ಯಾಂಡಲ್ ವುಡ್ ನಟಿ ತಾರಾ ಕಾರು ಚಾಲಕನ ವಿರುದ್ಧ FIR ದಾಖಲು

ಬೆಂಗಳೂರು: ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದಂತ ಆರೋಪದ ಹಿನ್ನಲೆಯಲ್ಲಿ, ಸ್ಯಾಂಡಲ್ ವುಡ್ ನಟಿ ತಾರಾ ( Sandalwood Actress Tara ) ಅವರ ಕಾರು ಚಾಲಕನ ( Car Driver ) ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಕಳೆದ ಅಕ್ಟೋಬರ್ 29ರಂದು ನಟಿ ತಾರಾ ( Actress Tara ) ಅವರ ಕಾರು ಚಾಲಕ ಅಕ್ಷಯ್, ಬೆಂಗಳೂರಿನ ಕತ್ರಿಗುಪ್ಪೆಯ ಬಳಿಯಲ್ಲಿ ಹೋಗುತ್ತಿದ್ದಂತ ಸಂದರ್ಭದಲ್ಲಿ, ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದನು. ಈ ಪರಿಣಾಮ ಮುಂದೆ ಸಾಗುತ್ತಿದ್ದಂತ ಮತ್ತೊಂದು ಕಾರಿಗೆ ಗುದ್ದಿದ್ದನು. ಇದರಿಂದಾಗಿ ಗಿರೀಶ್ ಎಂಬಾತನ ಕಾರು ಜಖಂಗೊಂಡಿತ್ತು.ಈ ವೇಳೆಯಲ್ಲಿ ಅಕ್ಷಯ್ ಕಾರು ರಿಪೇರಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದ್ರೇ ಇದುವರೆಗೆ ಕಾರು ರಿಪೇರಿ ಮಾಡಿಸಿಕೊಟ್ಟಿರಲಿಲ್ಲ. ಹೀಗಾಗಿ ಜಖಂಗೊಂಡಿದ್ದಕಾರಿನ ಮಾಲೀಕ ಗಿರೀಶ್, ನಟಿ ತಾರಾ ಕಾರು ಚಾಲಕ ಅಕ್ಷಯ್ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಬನಶಂಕರಿ ಸಂಚಾರ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್ 279 ಅಡಿಯಲ್ಲಿ ಅಜಾಗರೂಕ ಚಾಲನೆ ಕೇಸ್ ದಾಖಲಿಸಿದ್ದಾರೆ.