ಸಿಎಂ ಮರಳುತ್ತಿದ್ದಂತೆ ದೆಹಲಿಗೆ ತೆರಳಿದ ಮಾಜಿ ಸಿಎಂ : ಕುತೂಹಲ ಕೆರಳಿಸಿದ ʼಶೆಟ್ಟರ್ʼ ದಿಢೀರ್ ಪ್ರಯಾಣ
ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಪ್ರಕರಣ ತುಂಬಾನೇ ಸದ್ದು ಮಾಡ್ತಿದೆ. ಹೀಗಿರುವ ಮೊನ್ನೆಯಷ್ಟೇ ದೆಹಲಿಗೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಪ್ರಧಾನಿ ಮೋದಿ ಜೊತೆ ಚರ್ಚಿಸಿದ್ದಾರೆ. ಆದ್ರೆ, ಅದನ್ನ ನಿರ್ಲಕ್ಷಿಸಿ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ.
ಹೌದು, ಸಿಎಂ ಬೊಮ್ಮಾಯಿ ಅವ್ರು ದೆಹಲಿಯಿಂದ ಹಿಂದಿರುಗುತ್ತಿದ್ದಂತೆ ಮಾಜಿ ಸಿಎಂ ಶೆಟ್ಟರ್ ಹುಬ್ಬಳ್ಳಿಯಿಂದ ನೇರವಾಗಿ ದೆಹಲಿಗೆ ತೆರಳಲಿದ್ದು, ಈ ದಿಢೀರ್ ದೆಹಲಿ ಪ್ರಯಾಣ ಕುತೂಹಲಕ್ಕೆ ಕಾರಣವಾಗಿದೆ.