ಮೊದಲ ಬಾರಿ ಮಗಳ ಮುಖ ರಿವೀಲ್ ಮಾಡಿದ ನಟಿ ಪ್ರಿಯಾಂಕ ಚೋಪ್ರಾ
ವಾಷಿಂಗ್ಟನ್: ಖ್ಯಾತ ನಟಿ ಪ್ರಿಯಾಂಖ ಚೋಪ್ರಾ ಸರೋಗಸಿ ಮೂಲಕ ಮಗುವನ್ನು ಪಡೆದಿದ್ದಾರೆ. ಇಷ್ಟು ದಿನಗಳ ಕಾಲ ಮಗಳ ಮುಖವನ್ನು ತೋರಿಸದ ನಟಿ ಇದೇ ಮೊದಲ ಬಾರಿಗೆ ಮಗಳ ಮುಖವನ್ನು ರಿವೀಲ್ ಮಾಡಿದ್ದಾರೆ.
ಪ್ರಿಯಾಂಕ ಇದೀಗ ಮೊದಲ ಬಾರಿಗೆ ಮಗಳು ಮಾಲ್ತಿ ಮೇರಿ ಮುಖವನ್ನು ಸಾರ್ವಜನಿಕವಾಗಿ ತೋರಿಸಿದ್ದಾರೆ.
ಪ್ರಶಸ್ತಿ ಪಡೆದ ಪತಿ ನಿಕ್ ಜೋನಸ್ ಹಾಗೂ ಸಹೋದರರಿಗೆ ಅಭಿನಂದನೆ ಸಲ್ಲಿಸಿರುವ ಪ್ರಿಯಾಂಕ ತನ್ನ ಮಗಳ ಮುಖವನ್ನು ಸಾರ್ವಜನಿಕರ ಮುಂದೆ ಮೊದಲ ಬಾರಿ ರಿವೀಲ್ ಮಾಡಿದ್ದಾರೆ. ಸದ್ಯ ಮಗಳ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2018 ರ ಡಿ.1,2 ರಂದು ಹಿಂದೂ - ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಜೋಧ್ ಪುರದಲ್ಲಿ ಪ್ರಿಯಾಂಕ - ನಿಕ್ ಜೋನಸ್ ದಾಂಪತ್ಯಕ್ಕೆ ಕಾಲಿಟ್ಟಿದ್ದರು. 2022 ರ ಜನವರಲ್ಲಿ ಬಾಡಿಗೆ ತಾಯ್ತಾನದ ಮೂಲಕ ಮೊದಲ ಮಗುವನ್ನು ಪ್ರೀತಿಯಿಂದ ದಂಪತಿ ಬರಮಾಡಿಕೊಂಡಿದ್ದರು