ಶಿಯೋಮಿ ಎಫ್‍ಡಿ ವಶಕ್ಕೆ ಪಡೆಯುವ ಐಟಿ ಆದೇಶ ರದ್ದುಪಡಿಸಿದ ಹೈಕೋರ್ಟ್

ಶಿಯೋಮಿ ಟೆಕ್ನಾಲಜಿ ಕಂಪನಿಯ ನಿಶ್ಚಿತ ಠೇವಣಿ(ಎಫ್ ಡಿ) ಗಳಿಂದ 3,700 ಕೋಟಿ ರೂ. ವಶಕ್ಕೆ ಪಡೆಯುವ ಸಂಬಂಧ ನಗರದ ಆದಾಯ ತೆರಿಗೆ ಇಲಾಖೆ(ಐಟಿ) ಉಪ ಆಯುಕ್ತರು ಜಾರಿಗೊಳಿಸಿದ್ದ ನೋಟೀಸ್ ನ್ನು ಹೈಕೋರ್ಟ್ ರದ್ದುಪಡಿಸಿದೆ. ನೋಟಿಸ್ ನ್ನು ಪ್ರಶ್ನಿಸಿ ಶಿಯೋಮಿ ಟೆಕ್ನಾಲಜಿ ಕಂಪನಿ ಸಲ್ಲಿಸದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.