ವಿಧಾನಸಭೆ ಕಲಾಪ ನಾಳೆ ಬೆಳಿಗ್ಗೆ 11ಕ್ಕೆ ಮುಂದೂಡಿಕೆ

ವಿಧಾನಸಭೆ ಕಲಾಪ ನಾಳೆ ಬೆಳಿಗ್ಗೆ 11ಕ್ಕೆ ಮುಂದೂಡಿಕೆ

ಬೆಂಗಳೂರು: ರಾಜ್ಯ ವಿಧಾನಸಭೆಯ ಕಲಾಪದ ವೇಳೆಯಲ್ಲಿ ಸರ್ಕಾರದ ವಿವಿಧ ಅಕ್ರಮ ಸೇರಿದಂತೆ 40% ಕಮೀಷನ್ ಸರ್ಕಾರ ಎಂಬುದಾಗಿ ವಿಪಕ್ಷಗಳ ಸದಸ್ಯರಿಂದ ಗದ್ದಲ, ಕೋಲಾಹರ ಏಳಿಸಲಾಯಿತು. ಈ ಹಿನ್ನಲೆಯಲ್ಲಿ ವಿಧಾನಸಭೆಯ ಕಲಾಪವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.

ರಾಜ್ಯ ಸರ್ಕಾರದ ವಿರುದ್ಧ ಕಮೀಷನ್ ಆರೋಪವನ್ನು ಕಾಂಗ್ರೆಸ್ ಮಾಡಿದ ಹಿನ್ನಲೆಯಲ್ಲಿ ವಿಧಾನಸಭೆಯ ಕಲಾಪದ ವೇಳೆಯಲ್ಲಿ ಸದನದಲ್ಲಿ ಗದ್ದಲ ಏರ್ಪಟ್ಟಿತ್ತು. ಗುತ್ತಿಗೆದಾರರ ಸಾವು, ಬಿಜೆಪಿ ಸರ್ಕಾರದ ಕಮೀಷನ್ ಆರೋಪದ ಕಾರಣ ಬಿಜೆಪಿ-ಕಾಂಗ್ರೆಸ್ ಪಕ್ಷದ ಸದಸ್ಯರ ನಡುವೆ ವಾಗ್ವಾದವನ್ನು ಉಂಟು ಮಾಡಿತ್ತು.

ಸದನದಲ್ಲಿನ ಗದ್ದಲವನ್ನು ತಡೆಯುವ ನಿಟ್ಟಿನಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಯತ್ನಿಸಿದರು. ಆದ್ರೇ ನಿಯಂತ್ರಣಕ್ಕೆ ಬರಲಿಲ್ಲ. ಈ ಹಿನ್ನಲೆಯಲ್ಲಿ ಸದನವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸದನದಲ್ಲಿ ಕಮೀಷನ್ ಆರೋಪ ಮಾಡಿದ ಹಿನ್ನಲೆಯಲ್ಲಿ ಗದ್ದಲಕ್ಕೆ ಕಾರಣವಾಗಿತ್ತು. ಗುತ್ತಿಗೆದಾರ ಸಂತೋಷ್ ಸಾವಿನಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದರು. ಅಲ್ಲದೇ ಕಾಂಗ್ರೆಸ್ ವಿರುದ್ಧ 10 ಕಮೀಷನ್ ಸರ್ಕಾರ ಎಂಬುದಾಗಿ ಆರೋಪಿಸಲಾಗಿತ್ತು, ಈಗ ಬಿಜೆಪಿ 40 ಸರ್ಕಾರ ಎಂಬುದಾಗಿ ಆರೋಪಿಸಲಾಗುತ್ತಿದೆ ಎಂದರು. ಇದರಿಂದಲೇ ಗದ್ದಲ ಉಂಟಾಗ ಕಾರಣ, ಕಲಾಪವನ್ನು ಮುಂದೂಡಲಾಗಿದೆ.