ವಿಜಯಪುರ: ಜಿಲ್ಲೆಯ ರೈತರಲ್ಲಿ ಕಣ್ಣೀರು ತರಿಸಿದ ಈರುಳ್ಳಿ ಬೆಲೆ ಕುಸಿತ

ವಿಜಯಪುರ: ತಾಲ್ಲೂಕಿನ ಮನಗೂಳಿ ಗ್ರಾಮದ ರೈತ ರುದ್ರೇಶ್ ಕುಂಟೋಜಿ ತಮ್ಮ ಎರಡು ಎಕರೆ ಭೂಮಿಯಲ್ಲಿ ಈರುಳ್ಳಿ ಬೆಳೆದಿದ್ದರು. ಆದರೆ ಈಗ, ಈರುಳ್ಳಿ ಮಾರುಕಟ್ಟೆ ದರ ಕುಸಿದಿರುವುದರಿಂದ ಮರುಕಪಡುವಂತಾಗಿದೆ.
ಈರುಳ್ಳಿ ಲಾಭ ಗಳಿಸುವುದನ್ನು ಬಿಡಿ, ರೈತರು ಸಾರಿಗೆ ವೆಚ್ಚವನ್ನು ಸಹ ಮರುಪಡೆಯಲು ಸಾಧ್ಯವಿಲ್ಲ" ಎಂದು ರುದ್ರೇಶ್ ಹೇಳುತ್ತಾರೆ.
ಈರುಳ್ಳಿಯನ್ನು ದೀರ್ಘಕಾಲ ಸಂಗ್ರಹಿಸಲು ಸಾಧ್ಯವಿಲ್ಲದ ಕಾರಣ ಮಾರುಕಟ್ಟೆ ಧಾರಣೆ ಏರುವವರೆಗೆ ಇಡುವ ಸ್ಥಿತಿಯಲ್ಲಿಲ್ಲ ಎಂದು ಅವರು ಹೇಳಿದರು.
ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿದ ನಂತರ ಜಿಲ್ಲೆಯ ಎಲ್ಲಾ ಈರುಳ್ಳಿ ರೈತರು ಎದುರಿಸುತ್ತಿರುವ ಪರಿಸ್ಥಿತಿ ಇದು.
ಒಂದು ಎಕರೆ ಭೂಮಿಯಲ್ಲಿ ಈರುಳ್ಳಿ ಬೆಳೆಯಲು ಸುಮಾರು 60,000 ರೂ.ಗಳನ್ನು ಖರ್ಚು ಅಗತ್ಯ. ಆದರೆ ಈರುಳ್ಳಿ ಕ್ವಿಂಟಾಲ್ಗೆ ಕನಿಷ್ಠ 2000 ರೂ.ಗಳನ್ನು ಪಡೆದರೆ ಮಾತ್ರ ರೈತರು ಸ್ವಲ್ಪ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ರುದ್ರೇಶ್ ತಿಳಿಸಿದರು.
"ಆದರೆ ಇಂದು, ಮುಕ್ತ ಮಾರುಕಟ್ಟೆಯಲ್ಲಿ ಬೆಲೆಗಳು ತುಂಬಾ ಕಡಿಮೆ. ಈರುಳ್ಳಿಯ ಗಾತ್ರದ ಆಧಾರದ ಮೇಲೆ ಪ್ರತಿ ಕ್ವಿಂಟಾಲ್ ಗೆ 200 ರಿಂದ 800 ರೂ.ಗಳವರೆಗೆ ಮಾತ್ರ ಮಾರಾಟ ಮಾಡಲಾಗುತ್ತದೆ.
ನಿಡಗುಂದಿ ಗ್ರಾಮದ ಮತ್ತೊಬ್ಬ ಈರುಳ್ಳಿ ಬೆಳೆಗಾರ ಆನಂದಪ್ಪ ದೊಡ್ಮನಿ ಮಾತನಾಡಿ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದಿದ್ದರೆ ಸುಮಾರು ಎಪ್ಪತ್ತು ಚೀಲ ಈರುಳ್ಳಿಯನ್ನುಎಸೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಕೆಲವು ಶ್ರೀಮಂತ ರೈತರು ಕೆಲವು ವಾರಗಳವರೆಗೆ ಈರುಳ್ಳಿಯನ್ನು ಸಂಗ್ರಹಿಸಲು ಸಹಾಯವಾಗುವ ಈರುಳ್ಳಿ ಶೆಡ್ ಅನ್ನು ನಿರ್ಮಿಸಿದ್ದಾರೆ, ಆದರೆ ಎಲ್ಲಾ ರೈತರು ತಮ್ಮ ಶೆಡ್ಗಳನ್ನು ಹೊಂದಿಲ್ಲದ ಕಾರಣ, ಅವರು ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ ಎಂದು ರುದ್ರೇಶ್ ಅಳಲು ತೋಡಿಕೊಂಡಿದ್ದಾರೆ.
ಈರುಳ್ಳಿ ಕೊಳೆಯಲು ಪ್ರಾರಂಭಿಸಿದರೆ, ರೈತರಿಗೆ ಈರುಳ್ಳಿಗೆ ಯಾವುದೇ ಬೆಲೆ ಸಿಗುವುದಿಲ್ಲ " ಎಂದು ಅವರು ಹೇಳಿದರು.
ಏತನ್ಮಧ್ಯೆ, ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಅವರು ರೈತರನ್ನು ನಷ್ಟದಿಂದ ಪಾರು ಮಾಡಲು ಪ್ರತಿ ಕ್ವಿಂಟಾಲ್ ಈರುಳ್ಳಿಗೆ 2,000 ರೂ.ಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಘೋಷಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ವಾರ್ಷಿಕವಾಗಿ ಸುಮಾರು 40,000 ಹೆಕ್ಟೇರ್ ಭೂಮಿಯಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ.
ಏತನ್ಮಧ್ಯೆ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಿ.ಎಸ್.ಬರಗಿಮಠ ಅವರು ಈರುಳ್ಳಿಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಮಾಹಿತಿ ನೀಡಿದರು.
ಈರುಳ್ಳಿ ಬೇಗ ಹಾಳಾಗುವ ವಸ್ತುವಾಗಿರುವುದರಿಂದ, ಸರ್ಕಾರವು ಎಂಎಸ್ಪಿ ನೀಡಲು ನಿರ್ಧರಿಸಿದರೂ, ಈರುಳ್ಳಿಯ ಕೊಯ್ಲು ಈಗಾಗಲೇ ಪ್ರಾರಂಭವಾಗಿರುವುದರಿಂದ ಅದನ್ನು ಫಾಸ್ಟ್ ಟ್ರ್ಯಾಕ್ ಮೋಡ್ನಲ್ಲಿ ಮಾಡಬೇಕು. ಎಂಎಸ್ಪಿ ಘೋಷಣೆಯ ನಂತರ, ಇಲಾಖೆ ಖರೀದಿ ಕೇಂದ್ರಗಳನ್ನು ತೆರೆಯಬೇಕಾಗುತ್ತದೆ. ಈರುಳ್ಳಿಯನ್ನು ಹೆಚ್ಚು ಕಾಲ ಇಡಲು ಸಾಧ್ಯವಿಲ್ಲದ ಕಾರಣ ಹದಿನೈದು ದಿನಗಳಲ್ಲಿ ಈರುಳ್ಳಿಯ ಸಂಗ್ರಹಣೆ ಮತ್ತು ವಿಲೇವಾರಿ ಮಾಡಬೇಕು" ಎಂದು ಅವರು ಹೇಳಿದರು