ರಾಜ್ಯದಲ್ಲಿ 6 ಹೈಟೆಕ್ ಸಿಟಿ ನಿರ್ಮಿಸುವುದಾಗಿ ಸಿಎಂ ಘೋಷಣೆ!

ರಾಜ್ಯದಲ್ಲಿ 6 ಹೈಟೆಕ್ ಸಿಟಿ ನಿರ್ಮಿಸುವುದಾಗಿ ಸಿಎಂ ಘೋಷಣೆ!

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 6 ನಗರಗಳನ್ನು 'ಹೈಟೆಕ್ ಸಿಟಿ'ಗಳಾಗಿ ನಿರ್ಮಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ, ರಜತ ಸಂಭ್ರಮದಲ್ಲಿರುವ ಏಷ್ಯಾದ ಅತೀ ದೊಡ್ಡ 'ಬೆಂಗಳೂರು ಟೆಕ್​ ಶೃಂಗಸಭೆ'ಯಲ್ಲಿ ಬುಧವಾರ ಮಾತನಾಡಿದ ಸಿಎಂ, ಆರು ನಗರಗಳ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದ್ದೇವೆ.

ಶೀಘ್ರ ಘೋಷಣೆ ಮಾಡುತ್ತೇವೆ ಎಂದರು.

ಬೆಂಗಳೂರು ಐಟಿ-ಬಿಟಿ ಸಿಟಿಯಾಗಿದ್ದು, ಇಡೀ ಜಗತ್ತಿನ ಗಮನ ಸೆಳೆದಿದೆ. ರಾಜ್ಯದಲ್ಲಿ ಇನ್ನೂ 6 ಹೊಸ ನಗರಗಳನ್ನ ಕಟ್ಟುತ್ತಿದ್ದೇವೆ. ಹೈಟೆಕ್ ಸಿಟಿಗಳಾಗಿ ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೈಸೂರು, ಬೆಂಗಳೂರು ಸಮೀಪದ ದೇವನಹಳ್ಳಿ‌ ಬಳಿ ಟೆಕ್ ಸಿಟಿ‌ ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಮುಂದಿನ 6 ತಿಂಗಳಲ್ಲಿ ದೇವನಹಳ್ಳಿ ಏರ್​ಪೋರ್ಟ್ ಬಳಿ ಸ್ಟಾರ್ಟ್ ಅಪ್ ಪಾರ್ಕ್​ ಪ್ರಾರಂಭಿಸಲಿದ್ದೇವೆ ಎಂದರು.