ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷಾಂತರ ಪರ್ವ..? ಕಾಂಗ್ರೆಸ್​ ಬಿಟ್ಟು ಕಮಲ ಹಿಡಿಯುತ್ತಾ ಸಂತೋಷ್ ಲಾಡ್​ ಟೀಂ..

ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷಾಂತರ ಪರ್ವ..? ಕಾಂಗ್ರೆಸ್​ ಬಿಟ್ಟು ಕಮಲ ಹಿಡಿಯುತ್ತಾ ಸಂತೋಷ್ ಲಾಡ್​ ಟೀಂ..

ಳ್ಳಾರಿ : ಇದು ರಾಜ್ಯ ರಾಜಕಾರಣದ ಸ್ಫೋಟಕ ಸುದ್ದಿಯಾಗಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷಾಂತರ ಪರ್ವ ಶುರುವಾಗಲಿದ್ದು, ಕಾಂಗ್ರೆಸ್​ ಬಿಟ್ಟು ಕಮಲ ಹಿಡಿಯುತ್ತಾ ಸಂತೋಷ್ ಲಾಡ್​ ಟೀಂ..? ಮಾಜಿ ಸಚಿವ ಸಂತೋಷ್ ಲಾಡ್ & ಟೀಂ ಪಕ್ಷಾಂತರ ಮಾಡುತ್ತಾ..?

ಸಂತೋಷ್ ಲಾಡ್​ಗೆ ಕಲಘಟಗಿ ಕ್ಷೇತ್ರದ ಟಿಕೆಟ್ ಸಿಗಲ್ವಾ..?

ಕಲಘಟಗಿಯಲ್ಲಿ ಲಾಡ್ ಸ್ಪರ್ಧೆ ಬಗ್ಗೆ ಸ್ಥಳೀಯ ನಾಯಕರಲ್ಲೇ ಭಿನ್ನಮತ ವ್ಯಕ್ತವಾಗುತ್ತಿದ್ದು, ಲಾಡ್​ಗೆ ಕಾಂಗ್ರೆಸ್​ ಟಿಕೆಟ್ ಬೇಡ ಅಂತಾ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಲಾಗುತ್ತಿದೆ. ಸಂತೋಷ್ ಲಾಡ್ ಕಳೆದ ಬಾರಿ 25 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಸಂತೋಷ್ ಲಾಡ್ ಜೊತೆಗೆ ಕಾಂಗ್ರೆಸ್​ಗೆ ಕೈಕೊಡುವ ಶಾಸಕರು ಯಾರು? ಲಾಡ್​ ಹಿಂಬಾಲಿಸ್ತಾರಾ ಸಂಡೂರು ಕಾಂಗ್ರೆಸ್​ ಶಾಸಕ ಇ. ತುಕಾರಾಂ..?

ಹೈಕಮಾಂಡ್​ ಈ ಬಾರಿ ಬಳ್ಳಾರಿ ಜಿಲ್ಲೆಯಿಂದ ಸ್ಪರ್ಧೆಗೆ ಸೂಚನೆ ನೀಡಿದ್ದು, ಲಾಡ್ ಜಿಲ್ಲೆಯಾದ್ಯಂತ (ದಾದ) ಕ್ಯಾಂಟೀನ್ ತೆರೆದು ಜನಸೇವೆಗೆ ಮುಂದಾಗಿದ್ದರು. ಬಳ್ಳಾರಿ ಜಿಲ್ಲೆಯಲ್ಲಿ ಸ್ಪರ್ಧೆಗೆ ಬಯಸಿದ್ದ ಸಂತೋಷ್​ ಲಾಡ್​ಗೆ ಕ್ಷೇತ್ರದ ಟೆನ್ಷನ್​​​ ಶುರುವಾಗಿದೆ.