ಮಾಧ್ಯಮ ಅಕಾಡೆಮಿ'ಯಲ್ಲಿ 'ಅಭಿಮನ್ಯು 'ಪ್ರಶಸ್ತಿ ಆರಂಭಿಸಲು ‌'ದತ್ತಿನಿಧಿ ಸ್ಥಾಪನೆ'

ಮಾಧ್ಯಮ ಅಕಾಡೆಮಿ'ಯಲ್ಲಿ 'ಅಭಿಮನ್ಯು 'ಪ್ರಶಸ್ತಿ ಆರಂಭಿಸಲು ‌'ದತ್ತಿನಿಧಿ ಸ್ಥಾಪನೆ'

ಬೆಂಗಳೂರು: ಮಾಧ್ಯಮ ಶೋಷಿತರು, ದಮನಿತರ ಪಕ್ಷಪಾತಿಯಾಗಿರಬೇಕೆಂಬ ಉದ್ದೇಶದೊಂದಿಗೆ ಮಾಧ್ಯಮ ಅಕಾಡೆಮಿಯಲ್ಲಿ 'ಅಭಿಮನ್ಯು 'ಪ್ರಶಸ್ತಿ ಆರಂಭಿಸಲು ‌ದತ್ತಿನಿಧಿಯೊಂದನ್ನು ಸ್ಥಾಪಿಸಿದೆ.

ಕನ್ನಡ ಮಾಧ್ಯಮ ಲೋಕದಲ್ಲಿ ವೈಚಾರಿಕ ನೆಲೆಗಟ್ಟು, ಶೋಚಿತರು, ದಮನಿತ ಹಾಗೂ ಅನ್ಯಾಯಕ್ಕೊಳಗಾದವರ ಪಕ್ಷಪಾತಿಯಾಗಿ ತನ್ನದೇ‌ ಆದ ನೆಲೆಗಟ್ಟಿನಲ್ಲಿ ಕೆಲಸ ಮಾಡುವ ಮೂಲಕ ಮಾಧ್ಯಮ ಲೋಕದ ಬಂಡುಕೋರ ಎಂದು ಖ್ಯಾತಿ ಪಡೆದಿರುವ 'ಅಭಿಮನ್ಯು'(ಪಾಕ್ಷಿಕ) ಪತ್ರಿಕೆ ಇದೀಗ ಹೊಸದೊಂದು ಆಯಾಮಕ್ಕೆ ಕಾಲಿಟ್ಟಿದೆ.

ಮಾಧ್ಯಮ ಲೋಕದಲ್ಲಿ ಗಳಿಸಿದ್ದನ್ನು ಮಾಧ್ಯಮಕ್ಕೆ ವಿನಿಯೋಗಿಸಬೇಕೆಂಬ ತತ್ವದ ಜೊತೆಗೆ ತಾನು ಹಾಕಿದ ಪರಂಪರೆ ಮುಂದುವರೆಯಬೇಕು.

ಮಾಧ್ಯಮ ಶೋಷಿತರು,ದಮನಿತರ ಪಕ್ಷಪಾತಿಯಾಗಿರಬೇಕೆಂಬ ಉದ್ದೇಶದೊಂದಿಗೆ ಮಾಧ್ಯಮ ಅಕಾಡೆಮಿಯಲ್ಲಿ 'ಅಭಿಮನ್ಯು 'ಪ್ರಶಸ್ತಿ ಆರಂಭಿಸಲು ‌ದತ್ತಿನಿಧಿಯೊಂದನ್ನು ಸ್ಥಾಪಿಸಿದೆ.

ಪ್ರತಿವರ್ಷ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ದಮನಿತರ ಪರವಾದ ಕಾಳಜಿಯ ವರದಿ, ಲೇಖನ, ಅಂಕಣ ಮತ್ತು ಸಂಪಾದಕೀಯ ಅಗ್ರ ಲೇಖನಗಳಿಗೆ ನಗದು ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಅಕಾಡೆಮಿಗೆ ಮನವಿ ಸಲ್ಲಿಸಿದೆ.

ಅಕಾಡೆಮಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಭಿಮನ್ಯು ಪತ್ರಿಕೆಯ ಸಂಪಾದಕ ಬಿ.ಎನ್.ರಮೇಶ್ ತಮ್ಮ ಪತ್ರಿಕಾ‌ ಬಳಗದೊಂದಿಗೆ ದತ್ತಿ ಪ್ರಶಸ್ತಿ ಸ್ಥಾಪನೆಯ ಕೋರಿಕೆಯ ಪತ್ರ ಹಾಗೂ ದತ್ತಿನಿಧಿಯ ಚೆಕ್ ಅನ್ನು ಅಕಾಡೆಮಿಯ ಅಧ್ಯಕ್ಷ ಸದಾಶಿವ ಶಣೈ ಅವರಿಗೆ ಸಲ್ಲಿಸಿದರು.

ಈ ವೇಳೆ ಉಪಸ್ಥಿತರಿದ್ದ ಅಕಾಡೆಮಿಯ ಸದಸ್ಯ ಕಂ.ಕ.ಮೂರ್ತಿ ಅಭಿಮಾನಿ ಪತ್ರಿಕೆಯ‌ ಉದ್ದೇಶವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಪತ್ರಿಕೆ‌ ಸದಾ ಶೋಷಿತರ ಪರ ಕಾಳಜಿ ಹೊಂದಿದ್ದು, ಇದೀಗ ದತ್ತಿ ಪ್ರಶಸ್ತಿ ಮೂಲಕ ತನ್ನ ಜನಪರ ನಿಲುವನ್ನು ಮುಂದುವರೆಸಿದೆ ಎಂದರು.

ಮತ್ತೊಬ್ಬ ಸದಸ್ಯ ಎಸ್.ಲಕ್ಷ್ಮೀನಾರಾಯಣ ಮಾತನಾಡಿ ಅಭಿಮನ್ಯು ಪತ್ರಿಕೆ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ವೈಚಾರಿಕ ನೆಲೆಗಟ್ಟಿನ ಪತ್ರಿಕೆ ಸಾಮಾಜಿಕ ಕಳಕಳಿ ಹೊಂದಿರುವ ಈ ಪತ್ರಿಕೆ ಇದೀಗ ತನ್ನ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಸ್ಥಾಪಿಸುತ್ತಿರುವುದು ಸ್ತುತ್ಯಾರ್ಹ ಕೆಲಸವಾಗಿದೆ ಎಂದು ಹೇಳಿದರು.