ಮಾಧ್ಯಮದವರ ಮೇಲೆ ʻಕೈ ʼ ಶಾಸಕ ಭೈರತಿ ಸುರೇಶ್‌ ದರ್ಪ: ʻಮಧ್ಯಪ್ರವೇಶಿಸಿ ಸುಮ್ಮನೆ ಇರಯ್ಯʼ ಎಂದ ಸಿದ್ದರಾಮಯ್ಯ

ಮಾಧ್ಯಮದವರ ಮೇಲೆ ʻಕೈ ʼ ಶಾಸಕ ಭೈರತಿ ಸುರೇಶ್‌ ದರ್ಪ: ʻಮಧ್ಯಪ್ರವೇಶಿಸಿ ಸುಮ್ಮನೆ ಇರಯ್ಯʼ ಎಂದ ಸಿದ್ದರಾಮಯ್ಯ

ವದೆಹಲಿ : ದೆಹಲಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜತೆ ಮಾಧ್ಯಮದವರು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಮಾಧ್ಯಮದವರ ಮೇಲೆ ಕೈ ಶಾಸಕ ಭೈರತಿ ಸುರೇಶ್‌ ದರ್ಪ ತೋರಿದ್ದು, ಪತ್ರಕರ್ತರನ್ನೇ ತಳ್ಳುವ ಮೂಲಕ ದುರಹಂಕಾರಿ ಮೆರೆದ ಘಟನೆ ಬೆಳಕಿಗೆ ಬಂದಿದೆ.

ದೆಹಲಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜತೆ ಮಾಧ್ಯಮದವರು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಪತ್ರಕರ್ತರನ್ನೇ ತಳ್ಳುವ ಮೂಲಕ ಭೈರತಿ ಸುರೇಶ್‌ ದರ್ಪ ತೋರಿದ್ದಾರೆ. ಅಷ್ಟೇ ಅಲ್ಲದೇ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ್ದು ತಿಳಿದು ಬಂದಿದೆ. ಈ ಘಟನೆಯನ್ನು ಗಮನಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ ಶಾಸಕ ಭೈರತಿ ಸುರೇಶ್‌ಗೆ ಸುಮ್ಮನಿರಯ್ಯ ಎಂದಿದ್ದಾರೆ. ಸಿದ್ದರಾಮಯ್ಯ ಪಕ್ಕದಲ್ಲೆ ಶಾಸಕ ಭೈರತಿ ಸುರೇಶ್‌ ಇರುವುದನ್ನು ತೋರಿಸಿಕೊಳ್ಳುವುದಕ್ಕಾಗಿ ದರ್ಪ ತೋರಿರುವುದು ಬೆಳಕಿಗೆ ಬಂದಿದೆ. ಶಾಸಕ ಭೈರತಿ ಸುರೇಶ್‌ ದರ್ಪಕ್ಕೆ ಕಾಂಗ್ರೆಸ್‌ ಮುಖಂಡರು ಭಾರೀ ವಿರೋಧ ವ್ಯಕ್ತವಾಗಿದೆ.