ಮಹಾರಾಷ್ಟ್ರಕ್ಕೆ ನೂತನ ರಾಜ್ಯಪಾಲರ ನೇಮಕ

ಮಹಾರಾಷ್ಟ್ರಕ್ಕೆ ನೂತನ ರಾಜ್ಯಪಾಲರ ನೇಮಕ

ವದೆಹಲಿ, ಫೆಬ್ರವರಿ 12; ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮುರಾಜ್ಯಪಾಲ ಬಿಎಸ್ ಕೊಶಿಯಾರಿ ರಾಜೀನಾಮೆ ಅಂಗೀಕಾರ ಮಾಡಿದರು.

ಮಹಾರಾಷ್ಟ್ರಕ್ಕೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ.

ಬಿಜೆಪಿ ನಾಯಕ, ಮಾಜಿ ಸಂಸದ ರಮೇಶ್ ಬೈಸ್‌ರನ್ನು ದ್ರೌಪದಿ ಮುರ್ಮು ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ. ಜಾರ್ಖಂಡ್ ಮತ್ತು ತ್ರಿಪುರ ರಾಜ್ಯದ ರಾಜ್ಯಪಾಲರಾಗಿ ರಮೇಶ್ ಬೈಸ್ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲ 80 ವರ್ಷದ ಬಿಎಸ್ ಕೊಶಿಯಾರಿ ಜನವರಿಯಲ್ಲಿ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದ್ದರು.

ಎಲ್ಲಾ ರಾಜಕೀಯ ಜವಾಬ್ದಾರಿಗಳಿಂದ ಬಿಡುಗಡೆ ಬಯಸುತ್ತೇನೆ. ರಾಜಕೀಯದಿಂದ ನಿವೃತ್ತಿ ಪಡೆದು ಓದು, ಬರಹದಲ್ಲಿ ಉಳಿದ ಜೀವನ ನಡೆಸುತ್ತೇನೆ ಎಂದು ಬಿಎಸ್ ಕೊಶಿಯಾರಿ ಹೇಳಿದ್ದರು. ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಬಿಎಸ್ ಕೊಶಿಯಾರಿ ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದಾರೆ. ಬಿಎಸ್ ಕೊಶಿಯಾರಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ರಮೇಶ್ ಬೈಸ್‌ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ರಮೇಶ್ ಬೈಸ್ ಪರಿಚಯ 1948, ಆಗಸ್ಟ್ 2ರಂದು ಜನಿಸಿದ ರಮೇಶ್ ಬೈಸ್ ಜಾರ್ಖಂಡ್, ತ್ರಿಪುರ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ರಮೇಶ್ ಬೈಸ್ ಮಧ್ಯಪ್ರದೇಶದ ರಾಯ್‌ಪುರ ಮೂಲದವರು. 2019ರಿಂದ 2021ರ ತನಕ ತ್ರಿಪುರ ರಾಜ್ಯಪಾಲರಾಗಿದ್ದರು. 2021ರ ಜುಲೈ 14ರಂದು ಜಾರ್ಖಂಡ್ ರಾಜ್ಯಪಾಲರಾಗಿ ನೇಮಕಗೊಂಡರು.

ಬಿಜೆಪಿಯ ಸದಸ್ಯರಾಗಿದ್ದ ರಮೇಶ್ ಬೈಸ್ 9, 11, 12, 13, 14 ಮತ್ತು 15, 16ನೇ ಲೋಕಸಭೆಗೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ರಾಜ್ಯ ಸಚಿವರಾಗಿದ್ದರು.

ರಮೇಶ್ ಬೈಸ್ ಮೊದಲು 1978 ರಲ್ಲಿ ರಾಯ್‌ಪುರದ ಮುನ್ಸಿಪಲ್ ಕಾರ್ಪೊರೇಶನ್‌ ಚುನಾವಣೆಯಲ್ಲಿ ಆಯ್ಕೆಯಾದರು. ಮಂದಿರ ಹಸೋಡ್ ಕ್ಷೇತ್ರದಿಂದ 1980ರಲ್ಲಿ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡರು.

ಆದರೆ 1985ರ ಚುನಾವಣೆಯಲ್ಲಿ ಸೋತರು. 1989ರಲ್ಲಿ ರಾಯ್‌ಪುರದಿಂದ 9ನೇ ಲೋಕಸಭೆಗೆ ಆಯ್ಕೆಗೊಂಡರು. ಬಳಿಕ 11, 12, 13, 14, 15 ಮತ್ತು 16ನೇ ಲೋಕಸಭೆಗೆ ಸತತವಾಗಿ ಮರು ಆಯ್ಕೆಗೊಂಡರು.