ಮಧ್ಯಪ್ರದೇಶದಲ್ಲಿ ಘೋರ ದುರಂತ : ಪತ್ನಿ, ಇಬ್ಬರು ಮಕ್ಕಳ ಜೊತೆ ಬಿಜೆಪಿ ಮಾಜಿ ಕೌನ್ಸಿಲರ್ ಆತ್ಮಹತ್ಯೆ

ಮಧ್ಯಪ್ರದೇಶದಲ್ಲಿ ಘೋರ ದುರಂತ : ಪತ್ನಿ, ಇಬ್ಬರು ಮಕ್ಕಳ ಜೊತೆ ಬಿಜೆಪಿ ಮಾಜಿ ಕೌನ್ಸಿಲರ್ ಆತ್ಮಹತ್ಯೆ

ವಿದಿಶಾ: ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಬಿಜೆಪಿಯ ಮಾಜಿ ಕೌನ್ಸಿಲರ್ ತನ್ನ ಕುಟುಂಬದ ಮೂವರು ಸದಸ್ಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಸಂಜೀವ್ ಮಿಶ್ರಾ (45), ಅವರ ಪತ್ನಿ ನೀಲಂ ಮಿಶ್ರಾ, ಇಬ್ಬರು ಪುತ್ರರಾದ ಅನ್ಮೋಲ್ ಮತ್ತು ಸಾರ್ಥಕ್ ಮಿಶ್ರಾ (13 ಮತ್ತು 7) ಎಂದು ಗುರುತಿಸಲಾಗಿದೆ.ಸಂಜೀವ್ ಮಿಶ್ರಾ ಮಾಜಿ ಬಿಜೆಪಿ ಕಾರ್ಪೊರೇಟರ್ ಆಗಿದ್ದು, ಬ್ರಾಸ್ ಮಿಲ್ ಬಳಿ 'ಜನತಾ ಭೋಜ್ನಾಲಯ' ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದರು.

ಸಲ್ಫಾಸ್ ಮಾತ್ರೆಗಳನ್ನು ಸೇವಿಸಿ ಬಿಜೆಪಿಯ ಮಾಜಿ ಕೌನ್ಸಿಲರ್ ತನ್ನ ಕುಟುಂಬದ ಮೂವರು ಸದಸ್ಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆ ವೇಳೆ ಪೊಲೀಸರು ಸ್ಥಳದಿಂದ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ. ಸಂಜೀವ್ ಅವರ ಮಗ 'ಮಸ್ಕ್ಯುಲರ್ ಡಿಸ್ಟ್ರೋಫಿ' ಎಂಬ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದು, ಇದು ಕುಟುಂಬವನ್ನು 5 ವರ್ಷಗಳ ಕಾಲ ಕಾಡಿತು ಎಂದು ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಅವರ ಅನಾರೋಗ್ಯದ ತೊಂದರೆಯನ್ನು ಭರಿಸಲು ಕುಟುಂಬಕ್ಕೆ ಸಾಧ್ಯವಾಗಲಿಲ್ಲ, ಆದ್ದರಿಂದ ನಮ್ಮ ಜೀವನವು ಕೊನೆಗೊಳ್ಳುತ್ತದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.ನಾಲ್ವರೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.