ಮತ್ತೆ ಉದ್ಯೋಗ ಕಡಿತದ ಬಗ್ಗೆ ಸುಳಿವು ಕೊಟ್ಟ ಸಿಇಒ ʻಮಾರ್ಕ್ ಜುಕರ್‌ಬರ್ಗ್ʼ

ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್(Mark Zuckerberg) ಮತ್ತೆ ಹೆಚ್ಚಿನ ಉದ್ಯೋಗಿಗಳನ್ನು ಮನಗೆ ಕಳುಹಿಸುವ ಅಂದ್ರೆ, ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಸುಳಿವು ನೀಡಿದ್ದಾರೆ ಎಂದು ವರದಿಯಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿಯು 11,000 ಉದ್ಯೋಗಗಳನ್ನು ಕಡಿತಗೊಳಿಸಿದ ನಂತರ ಈ ಮಾಹಿತಿ ಹೊರಬಿದ್ದಿದೆ.
'ಮ್ಯಾನೇಜರ್‌ಗಳನ್ನು ನಿರ್ವಹಿಸುವುದು, ವ್ಯವಸ್ಥಾಪಕರನ್ನು ನಿರ್ವಹಿಸುವುದು, ಕೆಲಸ ಮಾಡುತ್ತಿರುವ ಜನರನ್ನು ನಿರ್ವಹಿಸುವ ನಿರ್ವಹಣಾ ರಚನೆಯನ್ನು ನೀವು ಬಯಸುತ್ತೀರಿ ಎಂದು ನಾನು ಭಾವಿಸುವುದಿಲ್ಲ' ಎಂದು ಜುಕರ್‌ಬರ್ಗ್ ಸಭೆಯಲ್ಲಿ ವ್ಯವಸ್ಥಾಪಕರಿಗೆ ತಿಳಿಸಿದರು. ಜುಕರ್‌ಬರ್ಗ್ ಶೀಘ್ರದಲ್ಲೇ ಈ ಕೆಲವು ಪಾತ್ರಗಳನ್ನು ಕಡಿತಗೊಳಿಸಬಹುದು ಎಂದು ಹೇಳಿಕೆಯು ಸುಳಿವು ನೀಡುತ್ತದೆ.