ಪಾಕ್ ಪೇಶಾವರ ಮಸೀದಿ ಮೇಲೆ ಬಾಂಬ್ ಸ್ಫೋಟ; ಮೃತರ ಸಂಖ್ಯೆ 61ಕ್ಕೆ ಏರಿಕೆ

ಪಾಕ್ ಪೇಶಾವರ ಮಸೀದಿ ಮೇಲೆ ಬಾಂಬ್ ಸ್ಫೋಟ; ಮೃತರ ಸಂಖ್ಯೆ 61ಕ್ಕೆ ಏರಿಕೆ

ಪೇಶಾವರ: ಪಾಕಿಸ್ತಾನದ ಪೇಶಾವರದ ಮಸೀದಿಯೊಂದರಲ್ಲಿ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆಯಾಗಿದ್ದು, 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಮಧ್ಯಾಹ್ನ 1.40 ರ ಸುಮಾರಿಗೆ ಪೊಲೀಸ್ ಲೈನ್ಸ್ ಪ್ರದೇಶದ ಮಸೀದಿಯೊಳಗೆ ಪೊಲೀಸ್, ಸೇನೆ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯನ್ನು ಒಳಗೊಂಡ ಭಕ್ತರು ಝುಹ್ರ್ (ಮಧ್ಯಾಹ್ನ) ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ಪ್ರಬಲ ಸ್ಫೋಟ ಸಂಭವಿಸಿದೆ.

ಮುಂದಿನ ಸಾಲಿನಲ್ಲಿದ್ದ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ಇದರಿಂದ ಛಾವಣಿಯು ಭಕ್ತರ ಮೇಲೆ ಕುಸಿದಿದೆ. ಈ ಮಸೀದಿಯು ಪೊಲೀಸ್ ಹೌಸಿಂಗ್ ಬ್ಲಾಕ್ಗೆ ಸಮೀಪದಲ್ಲಿದ್ದು, ಸ್ಫೋಟ ಸಂಭವಿಸಿದಾಗ ಸುಮಾರು 260 ಜನರು ಒಳಗೆ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರಲ್ಲಿ ಐವರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಮಸೀದಿಯ ಪ್ರಾರ್ಥನಾ ನಾಯಕ ಮೌಲಾನಾ ಸಾಹಿಬ್ಜಾದಾ ನೂರುಲ್ ಅಮೀನ್ ಕೂಡ ಸೇರಿದ್ದಾರೆ.