ಬೆಂಗಳೂರಿನಲ್ಲಿ ಎಂಎಲ್ಸಿ ಭೋಜೇಗೌಡ ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನ : ಆರೋಪಿ ಬಂಧನ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಖದೀಮರು ಕಾರು ಕದ್ದು ನಂಬರ್ ಬದಲಾಯಿಸಿ ಮಾರಾಟ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಬೆಳಂಗಳೂರಿನಲ್ಲಿ ಅಂತಹದೇ ಒಂದು ಪ್ರಕರಣ ಬಯಲಿಗೆ ಬಂದಿದೆ.
ಹೌದು ಜೆಡಿಎಸ್ ಎಂಎಲ್ಸಿ ಭೋಜೇಗೌಡ ಅವರ ಕಾರಿನ ನಂಬರ್ ಬಳಸಿ, ಕದ್ದ ಕಾರನ್ನ ಮಾರಾಟ ಮಾಡಲು ಯತ್ನಿಸಲಾಗಿದೆ.
ಇದನ್ನ ನೋಡಿದ ಭೋಜೇಗೌಡ ಅವರ ಪಿಎ ಮಾದೇಶ್ ಶಾಕ್ ಆಗಿದ್ದಾರೆ. ಅನುಮಾನಗೊಂಡ ಮಾದೇಶ್ ಶೋರೂಂನಲ್ಲಿ ವಿಚಾರಿಸಿದ್ದಾರೆ. ಈ ವೇಳೆ ಕಾರು ಮಾರಾಟಕ್ಕಿಟ್ಟಿರುವ ಬಗ್ಗೆ ಗೊತ್ತಾಗಿದೆ.ವಿಷಯ ತಿಳಿಯುತಿದ್ದ ಹಾಗೆ ಕೂಡಲೇ ಎಂಎಲ್ಸಿ ಭೋಜೇಗೌಡ ಪಿಎ ಮಾದೇಶ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.